​ಪ್ರಜ್ಞಾ ಇಂಟರ್ನ್ಯಾಶನಲ್ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ 

ಉಡುಪಿ ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಆವರಣದಲ್ಲಿ ಧರ್ಮದರ್ಶಿ  ರಮಾನಂದ ಗುರೂಜಿ ಅವರ ಸಂಸ್ಥಾಪಕತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಜ್ಞಾ ಇಂಟರ್‌ನ್ಯಾಷನಲ್ ಶಾಲೆಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ಯನ್ನು ಸರಕಾರದ ಆದೇಶದಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಆಚರಿಸಲಾಯಿತು .​ ಈ ಸಮಾರಂಭದಲ್ಲಿ  ಖ್ಯಾತ  ​​​ಅಥ್ಲೆಟಿಕ್ ಪಟು ಶ್ರೀ ಅಭಿನ್ ದೇವಾಡಿಗ  ಧ್ವಜಾರೋಹಣಗೈದರು.

ಶಾಲಾ ಪ್ರಾಂಶುಪಾಲೆ ಶ್ರೀಮತಿ ಉಷಾ ರಮಾನಂದ ಕಾರ್ಯಕ್ರಮ ನಿರೂಪಿಸಿದರು .​ ಶಾಲಾ ಆಡಳಿತ ಮಂಡಳಿಯ ಬಾಲಸುಬ್ರಹ್ಮಣ್ಯ ರಾವ್ ಶಾಲಾ ಕೋ ಆರ್ಡಿನೇಟರ್  ಶ್ರೀಮತಿ ಕುಸುಮಾ ನಾಗರಾಜ್ ಶ್ರೀದುರ್ಗಾ ಆದಿಶಕ್ತಿ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀ ಗಜಾನನ ಭಟ್​,​ ಭೋಜ ಅಮೀನ್ ಕಟಪಾಡಿ​,​ ಶ್ರೀ ಸುನೀಲ್ ​ಪೆರ್ಡೂರ್,   ಶಿಕ್ಷಕಿಯರಾದ ಶ್ರೀಮತಿ ಉಪ್ಪೂರು ಭಾಗ್ಯಲಕ್ಷ್ಮೀ​,​ ಪೂರ್ಣಿಮಾ ಪ್ರೇರಿತ ​,​ ಕವಿತಾ  ಜತ್ತನ್ ​,​ಕಲಾವತಿ ಆಚಾರ್ಯ ರಾಘವೇಂದ್ರ ಯು​, .ಕುಮಾರಿ ಮೃಣಾಲ್ ಕೃಷ್ಣ ​ ಉಪಸ್ಥಿತರಿದ್ದ​ರು.   

Leave a Reply