ರಸ್ತೆ ಹೊಂಡಗಳಿಂದ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿದ ಬಸ್!

ಕುಂಭಾಶಿ: ರಾಷ್ಟ್ರೀಯ ಹೆದ್ದಾರಿ 66 ಕುಂದಾಪುರದಿಂದ ಉಡುಪಿಯ ಕೆಲ ರಸ್ತೆಗಳಲ್ಲಿ ಬಿದ್ದಿರುವ ಹೊಂಡದಲ್ಲಿ ಮಳೆ ನೀರು ಶೇಖರಣೆಯಾಗಿರುವುದರಿಂದ ವಾಹನ ಸವಾರರಿಗೆ ನಿತ್ಯ ಕಿರಿಕಿರಿ ಉಂಟಾಗುತ್ತಿದೆ.

ಶನಿವಾರ ರಸ್ತೆ ಮಧ್ಯ ಬಿದ್ದಿರುವ ಹೊಂಡದಲ್ಲಿ ಮಳೆ ನೀರು ತುಂಬಿದ್ದರಿಂದ ಬಸ್ಸೊಂದು ಹೊಂಡದಲ್ಲಿ ಹೋಗಿ ಡಿವೈಡರ್ ಏರಿ ನಿಂತ ಘಟನೆ ತಾಲೂಕಿನ ಕುಂಭಾಶಿ ಕೊರವಡಿ ಕ್ರಾಸ್ ಸಮೀಪದಲ್ಲಿ ನಡೆದಿದೆ. ಇದರೊಂದಿಗೆ ಒಂದು ಓಮಿನಿ ವಾಹನ ಸಹ ಹೊಂಡಕ್ಕೆ ಹಾರಿ ಟೈಯರ್ ಪಂಚರ್ ಆಗಿದೆ.

Leave a Reply