ಉಡುಪಿ ಅಂಚೆ ವಿಭಾಗ : ಹಿಂದಿ ಪಾಕ್ಷಿಕ ಆಚರಣೆ

ಎಲ್ಲಾ ಭಾಷೆಗಳಲ್ಲಿ ತಾನು ಸೇರಿಕೊಂಡು ತನ್ನಲ್ಲಿ ಎಲ್ಲಾ ಭಾಷೆಗಳನ್ನು ಅಳವಡಿಸಿಕೊಂಡು ಭಾಷೆಯ ಮುಖಾಂತರ ಭಾರತವನ್ನು ಜೋಡಿಸುವ ಒಂದು ವಿಶೇಷ ಭಾಷೆ ಹಿಂದಿ. ಈ ಒಂದು ವಿಶೇಷ ಗುಣದಿಂದಾಗಿ ಜಗತ್ತಿನಲ್ಲಿಯೇ ಅತಿ ಹೆಚ್ಚು ಮಾತನಾಡುವ ತೃತೀಯ ಭಾಷೆಯಾಗಿ ಹಿಂದಿ ಪರಿಗಣಿಸಲ್ಪಡುತ್ತಿದೆ ಎಂದು ಹಿರಿಯಡ್ಕ ಸರಕಾರಿ ಪದವಿ ಪೂರ್ವ ಕಾಲೇಜಿನ ಹಿಂದಿ ಪ್ರಾಧ್ಯಾಪಕರಾದ ಡಾ.ಅನಂತರಾಮ ನಾಯಕ್ ಅಭಿಪ್ರಾಯ ಪಟ್ಟರು. ಶ್ರೀಯುತರು ಭಾರತೀಯ ಅಂಚೆ ಇಲಾಖೆ,ಉಡುಪಿ ಅಂಚೆ ವಿಭಾಗದ ಪ್ರಧಾನ ಅಂಚೆ ಕಚೇರಿಯಲ್ಲಿ ಆಯೋಜಿಸಿದ ಹಿಂದಿ ಪಾಕ್ಷಿಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಹಿಂದಿ ದಿನಾಚರಣೆ ಹಾಗೂ ಹಿಂದಿ ಭಾಷೆಯ ಮಹತ್ವ ವಿವರಿಸಿದರು. ಸಭಾಧ್ಯಕ್ಷತೆಯನ್ನು ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ನವೀನ್ ಚಂದರ್ ವಹಿಸಿದ್ದರು. ಸಹಾಯಕ ಅಂಚೆ ಅಧೀಕ್ಷಕರಾದ ಕೃಷ್ಣರಾಜ ವಿಠಲ ಭಟ್ ಪ್ರಸ್ತಾವನೆಯ ಮಾತುಗಳನ್ನಾಡಿದರು.ಅಂಚೆ ನಿರೀಕ್ಷಕ ಮಾಧವ ಟಿ.ವಿ ಉಪಸ್ಥಿತರಿದ್ದರು. ಆಶಾಲತಾ ಹಾಗು ಸವಿತಾ ಪ್ರಾರ್ಥಿಸಿ ಚಿತ್ರಾ ದೇವಾಡಿಗ ಸ್ವಾಗತಿಸಿದರು. ಪೂರ್ಣಿಮಾ ಜನಾರ್ದನ್ ಅತಿಥಿಗಳನ್ನು ಪರಿಚಯಿಸಿದರು. ನೂತನ್ ದೇಶ ಭಕ್ತಿ‌ಗೀತೆ,ಭಾಷಣ ಸ್ಪರ್ಧೆ ನಡೆಸಿಕೊಟ್ಟರು.ಭಾರತಿ ನಾಯಕ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಉಡುಪಿ ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕ ಗುರುಪ್ರಸಾದ್ ವಂದಿಸಿದರು. ಮೇಘನಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply