‘ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ‘ಬ್ಯಾಂಕಿಂಗ್ ಪ್ರಾಕ್ಟೀಸಸ್’ ಕೃತಿಗಳ ಅನಾವರಣ

ಉಡುಪಿ : ಪೂರ್ಣಪ್ರಜ್ಞ ಕಾಲೇಜಿನ ಅರ್ಥಶಾಸ್ತç ವಿಭಾಗದ ಡಾ. ಸೌಜನ್ಯ ಎಸ್ ಶೆಟ್ಟಿ ಮತ್ತು ಡಾ. ಪ್ರಕಾಶ್ ರಾವ್ ಬರೆದ ಮಂಗಳೂರು ವಿ ವಿಯ ಬಿ.ಕಾಂ. ತರಗತಿಯ ನಾಲ್ಕನೇ ಸೆಮಿಸ್ಟರಿನ ‘ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ‘ಬ್ಯಾಂಕಿಂಗ್ ಪ್ರಾಕ್ಟೀಸಸ್’ ಕೃತಿಗಳ ಅನಾವರಣ ಕಾರ್ಯಕ್ರಮವು ಕಾಲೇಜಿನಲ್ಲಿ ಇತ್ತೀಚೆಗೆ ನಡೆಯಿತು. 

ಉಪಸ್ಥಿತರಿದ್ದ ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಅಧ್ಯಾಪಕರು ನಿರಂತರ ಜ್ಞಾನದಾಹಿಯಾಗಿ ಕ್ರೀಯಾಶೀಲರಾಗಿದ್ದು ವಿದ್ಯಾರ್ಜನೆ ನಿರತರಾಗಿರಬೇಕು. ತಾವು ಗಳಿಸಿದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಸಾರ್ಥಕತೆ ಪಡೆಯಬೇಕು. ಅಧ್ಯಾಪಕರುಗಳ ಅಧ್ಯಯನ ಶೀಲತೆಗೆ ನಮ್ಮ ಪರಂಪರೆಯ ಋಷಿ ಮುನಿಗಳು ನಮಗೆ ಆದರ್ಶಪ್ರಾಯರು. ಹಾಗೇ ಸದಾ ವಿದ್ಯಾರ್ಥಿಯಾಗಿರುವ ಅಧ್ಯಾಪಕರು ವಿದ್ಯಾರ್ಥಿಗಳ ಚಿತ್ತಾಪಹಾರಿಗಳಾಗಿರುತ್ತಾರೆ ಎಂದು ಆಶೀರ್ವಚನ ನೀಡಿದರು.

ಆಡಳಿತ ಮಂಡಳಿಯ ಗೌರವ ಕೋಶಾಧಿಕಾರಿ ಪ್ರದೀಪ್ ಕುಮಾರ್ ಅವರು ಕಾಲೇಜಿನ ಆಡಳಿತ ಮಂಡಳಿಯು ಅಧ್ಯಾಪಕರುಗಳಿಗೆ ನಿರಂತರ ಪ್ರೋತ್ಸಾಹ ಮತ್ತು ಬೆಂಬಲ ನೀಡುತ್ತದೆ. ಇದರ ಸದುಪಯೋಗ ಪಡೆದುಕೊಂಡು ನಮ್ಮ ಅಧ್ಯಾಪಕರು ಮಾದರಿ ಅಧ್ಯಾಪಕರಾಗಬೇಕೆಂದು ಹೇಳಿ ಲೇಖಕರಿಗೆ ಶುಭ ಹಾರೈಸಿದರು. 

ಕಾಲೇಜಿನ ಪ್ರಾಂಶುಪಾಲ ಡಾ. ರಾಘವೇಂದ್ರ ಎ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಮತ್ತು ಲೇಖಕ ಡಾ. ಪ್ರಕಾಶ್ ರಾವ್ ಸ್ವಾಗತಿಸಿದರು. ಲೇಖಕಿ ಡಾ. ಸೌಜನ್ಯ ಎಸ್ ಶೆಟ್ಟಿಯ ವಂದಿಸಿ, ಮಹಾಲಕ್ಷ್ಮೀ ಕಾರ್ಯಕ್ರಮ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply