ಉಡುಪಿ ಪೊಲೀಸರಿಂದ ಹೆವಿ ಟ್ರಾಫಿಕ್ ನಲ್ಲೂ ನಗರ ಹಾವಿಗೆ  ಸುಗಮ ಸಂಚಾರ 

ಉಡುಪಿ: ನಾಗರ​ ​ಹಾವೊಂದು ನಗರದ ​ಕಲ್ ಸಂಕ ​ಜಂಕ್ಷನ್‌ಗೆ ಆಗಮಿಸಿ​ದ ಘಟನೆ ಎಲ್ಲರನ್ನು ವಿಚಲಿಸಿತಗೊಳಿಸಿತ್ತು. ಗುರುವಾರ ಸಾಯಂಕಾಲ ಸದಾಕಾಲ ವಾಹನ ಓಡಾಟದಿಂದ ಕೂಡಿರುವ ಕಲ್ಸಂಕ ಜಂಕ್ಷನ್‌ನಲ್ಲಿ ನಾಗರಹಾವು ಕಾಣಿಸಿಕೊಂಡಿದೆ. 

ಹಾವು ನೋಡಿ ವಾಹನ ಸವಾರರು, ಸಂಚಾರ ಪೊಲೀಸರು ತಬ್ಬಿಬ್ಬಾದರು. ಗುಂಡಿಬೈಲು ಹೋಗುವ ರಸ್ತೆಯ ಕಡೆಯಿಂದ ಕೃಷ್ಣ ಮಠಕ್ಕೆ ಹೋಗುವ ರಸ್ತೆಯ ಕಡೆಗೆ ಹಾವು ಹೋಗುತ್ತಿದ್ದು. ಆಚೀಚೆ ಓಡಾಡುವ ವಾಹನ, ಜನರು​, ​ ರಸ್ತೆಯ ಬಿಸಿಗೆ ಹಾವು ಸಹ ಗಲಿಬಿಲಿಗೊಂಡಿದೆ. ಇದನ್ನು ಗಮನಿಸಿದ ಸಂಚಾರ ಪೊಲೀಸ್ ಸಿಬ್ಬಂದಿ 4 ಕಡೆಗಳಲ್ಲಿ ವಾಹನಗಳನ್ನು ತಡೆದು, ಹಾವಿಗೆ ಸರಾಗವಾಗಿ ಸಾಗಲು ಅನುಕೂಲ ಮಾಡಿಕೊಟ್ಟಿದ್ದಾರೆ.
 
ನಾಗರಹಾವು ವೃತ್ತವನ್ನು ದಾಟಲು ಅರ್ಧ ಗಂಟೆ ಸಮಯ ತೆಗೆದುಕೊಂಡಿತು. ಸಣ್ಣಗಾಯ ಮತ್ತು ಬಿಸಿಲಿನಿಂದ ಬಳಲಿದ್ದ ಹಾವನ್ನು ಗುಂಡಿಬೈಲಿನ ಭಟ್ಟರೊಬ್ಬರು ಹಿಡಿದು, ಆರೈಕೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ ಎಂದು ಸಂಚಾರ ಠಾಣೆ ಎಸ್‌ಐ ಖಾದರ್ ವಿಜಯವಾಣಿಗೆ ತಿಳಿಸಿದರು. ​​
 
 
 
 
 
 
 
 
 
 
 

Leave a Reply