ಸ್ವಂತ ಖರ್ಚಿನಲ್ಲಿ 1714 ಮನೆಗಳಿಗೆ ತೆರಳಿ ಕಿಟ್ ನೀಡಿದ ಪಲಿಮಾರು ಬಿಜೆಪಿ ಕಾರ್ಯಕರ್ತರ ಕಾರ್ಯ ಶ್ಲಾಘನೀಯ : ಶಾಸಕ ಲಾಲಾಜಿ ಮೆಂಡನ್

ಪಲಿಮಾರು: ಇಲ್ಲಿನ ಬಿಜೆಪಿ ಕಾರ್ಯಕರ್ತರ ಸತತ ಪರಿಶ್ರಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ 19 ತಡೆಗಟ್ಟುವಲ್ಲಿ ಯಶಸ್ವಿ ಹೆಜ್ಜೆಯನ್ನು ಇಡುತ್ತಿದ್ದು. ಸೊಂಕೀತರಿಗೆ ಆತ್ಮ ವಿಶ್ವಾಸ ತುಂಬುವ ಕೆಲಸದಲ್ಲಿ 1714 ಮನೆಗಳಿಗೆ ವೈಯಕ್ತಿಕವಾಗಿ ಭೇಟಿ ಮಾಡಿ ಕೊರೊನಾ ಜಾಗೃತಿಯ ಬಗ್ಗೆ ಮನವರಿಕೆ ಮಾಡಿ ಕೋವಿಡ್ ಕಿಟ್ ಗಳನ್ನು ಹಸ್ತಾಂತರಿಸಿರುವುದು ಜಿಲ್ಲೆಗೆ ಮಾದರಿಯಾಗಿದೆ ಎಂದು ಶಾಸಕ ಲಾಲಾಜಿ ಆರ್ ಮೆಂಡನ್ ಅಭಿಪ್ರಾಯ ಪಟ್ಟರು.

ಪಲಿಮಾರು ಪಂಚಾಯತ್ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರು ಸತತ 9 ದಿನಗಳಿಂದ ಪಲಿಮಾರು ಹಾಗೂ ನಂದಿಕೂರು ಗ್ರಾಮಗಳಲ್ಲಿ 1714 ಮನೆಗಳಿಗೆ ಭೇಟಿ ಮಾಡಿ ಸ್ವಂತ ಖರ್ಚಿನಲ್ಲಿ ಪ್ರತಿ ಮನೆಗೆ ಕಿಟ್ ವಿತರಿಸಿದ ಸಮಾರೋಪ ಕಾರ್ಯಕ್ರಮವನ್ನು ಪಲಿಮಾರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ, ಮೆಸ್ಕಾಂ ಸಿಬ್ಬಂದಿಗಳಿಗೆ, ಘನ ತ್ಯಾಜ್ಯ ವಿಲೇವಾರಿ ಘಟಕ ಸಿಬ್ಬಂದಿಗಳಿಗೆ ಕಿಟ್ ವಿತರಿಸಿ ಹಾಗೂ ಪಂಚಾಯತ್ ವ್ಯಾಪ್ತಿಯಲ್ಲಿ ಉತ್ತಮ ರೀತಿಯಲ್ಲಿ ವೈದ್ಯಕೀಯ ಸೇವೆ ನೀಡುತ್ತಿರುವ ಡಾ. ಮನೋಜ್ ಕುಮಾರ್, ಡಾ. ಸೌಮ್ಯ, ಡಾ. ಪೂರ್ಣಿಮಾ ಪೈ ವೈದ್ಯರುಗಳಿಗೆ ಸನ್ಮಾನಿಸಿ ಮಾತನಾಡಿದರು.

ಕೋವಿಡ್ 19 ಎರಡನೇ ಹಂತವು ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿರುವ ಸಂದರ್ಭದಲ್ಲಿ ಪಲಿಮಾರು ಪಂಚಾಯತ್ ವ್ಯಾಪ್ತಿಯಲ್ಲಿ ಕೊರೊನಾ ಪಾಸಿಟಿವ್ ಕೇಸ್ ಗಳು ಹೆಚ್ಚೇನು ವರದಿಯಾಗಿಲ್ಲ, ಪಾಸಿಟಿವ್ ಬಂದ ಮನೆಗಳ ಮೇಲೆ ಸಂಪೂರ್ಣ ನಿಗಾ ವಹಿಸಿ ಪ್ರಾಥಮಿಕ ಸಂಪರ್ಕಿತರನ್ನು ಹೋಮ್ ಕ್ವಾರಂಟೈನ್ ಮಾಡಿಸಲಾಗಿತ್ತು.ಈ ಸಂದರ್ಭದಲ್ಲಿ ಅವರಿಗೆ ಅಗತ್ಯ ವಸ್ತುಗಳ ಪೊರೈಕೆ ಒದಗಿಸುವ ಸಂಪೂರ್ಣ ಜವಾಬ್ದಾರಿಯನ್ನು ಪಲಿಮಾರು ಬಿಜೆಪಿ ಕಾರ್ಯಕರ್ತರು ವಹಿಸುಕೊಂಡಿದ್ದರು.ಇದರ ಪರಿಣಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೇವಲ 7 ಪಾಸಿಟಿವ್ ಕೇಸ್ ಗಳು ದಾಖಲಾಗಿವೆ.

ಮಂಗಳೂರು ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷ ಯಶ್ ಪಲ್ ಸುವರ್ಣ, ಕಾಪು ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ನಿಕಟ ಪೂರ್ವ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಕಾಪು ಯೋಜನಾ ಪ್ರಾಧಿಕಾರ ಅಧ್ಯಕ್ಷ ಸುಧಾಮ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಶಿಕಾಂತ್ ಪಡುಬಿದ್ರೆ, ಪಂಚಾಯತ್ ಅಧ್ಯಕ್ಷೆ ಗಾಯತ್ರಿ ಪ್ರಭು, ಉಪಾಧ್ಯಕ್ಷೆ ಸೌಮ್ಯ ಶೆಟ್ಟಿ, ಪಂಚಾಯತ್ ಸದಸ್ಯರಾದ ರಾಯೇಶ್ ಪೈ, ಸುಮಂಗಲ ದೇವಾಡಿಗ, ಪ್ರವೀಣ್ ಆಡ್ವೇ, ಮಹೇಶ್ ಶೆಟ್ಟಿ, ಪ್ರಿಯ ಶೆಟ್ಟಿ, ರಶ್ಮಿ ಸುಜಾತಾ, ಭೂ ನ್ಯಾಯ ಮಂಡಳಿ ಸದಸ್ಯ ದಿನೇಶ್ ಪಲಿಮಾರು, ಸ್ಥಳೀಯ ಬಿಜೆಪಿ ಪ್ರಮುಖರಾದ ಪ್ರಸಾದ್ ಪಲಿಮಾರು, ಹರೀಶ್ ಶೆಟ್ಟಿ, ಸತೀಶ್ ಶೆಟ್ಟಿ,ಮಹೇಶ್ ಪೂಜಾರಿ,ಕಿಶೋರ್ ದೇವಾಡಿಗ, ವಾಸುದೇವ ಪಲಿಮಾರು ಹಾಗೂ ಮತ್ತಿತರರ ಕಾರ್ಯಕರ್ತರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply