Janardhan Kodavoor/ Team KaravaliXpress
24.6 C
Udupi
Thursday, July 7, 2022
Sathyanatha Stores Brahmavara

ಪಂಡಿತ್ ದೀನದಯಾಳ್ ಉಪಾಧ್ಯಾಯರ ಬಲಿದಾನ ದಿನದ ಸಲುವಾಗಿ ಸಮರ್ಪಣಾ ದಿನ ಪುಷ್ಪಾರ್ಚನೆ

ಉಡುಪಿ : ಭಾರತೀಯ ಜನಸಂಘದ ಸ್ಥಾಪಕರಲ್ಲಿ ಒಬ್ಬರಾದ ಪಂಡಿತ್ ದೀನದಯಾಳ್ ಉಪಾಧ್ಯಾಯರ ಬಲಿದಾನ ದಿನವನ್ನು ಆಚರಿಸಲಾಗುತ್ತಿದ್ದು, ಭಾರತೀಯ ಜನತಾ ಪಾರ್ಟಿ ಮಹಾಶಕ್ತಿ ಕೇಂದ್ರ ಕರಂಬಳ್ಳಿ ವತಿಯಿಂದ ಕರಂಬಳ್ಳಿ ವಠಾರದಲ್ಲಿ ಶುಕ್ರವಾರದಂದು ಆಯೋಜಿಸಲಾದ “ಸಮರ್ಪಣಾ ದಿನ ಪುಷ್ಪಾರ್ಚನೆ – ನಿಧಿ ಸಮರ್ಪಣೆ” ಕಾರ್ಯಕ್ರಮದಲ್ಲಿ ಶಾಸಕ ಕೆ. ರಘುಪತಿ ಭಟ್ ಭಾಗವಹಿಸಿದರು.

ನಗರಸಭಾ ಸದಸ್ಯರುಗಳಾದ ಗಿರಿಧರ್ ಆಚಾರ್ಯ, ಬಾಲಕೃಷ್ಣ ಶೆಟ್ಟಿ, ಪ್ರಭಾಕರ ಪೂಜಾರಿ, ಅರುಣಾ ಸುಧಾಮ, ಭಾರತಿ ಪ್ರಶಾಂತ್, ಕರಂಬಳ್ಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಕಿಶೋರ್ ಕರಂಬಳ್ಳಿ, ಕಾರ್ಯಕ್ರಮದ ಸಂಚಾಲಕರು ರಶ್ಮಿತಾ ಬಾಲಕೃಷ್ಣ ಶೆಟ್ಟಿ, ವಾರ್ಡ್ ಹಾಗೂ ಬೂತ್ ಅಧ್ಯಕ್ಷರು ಮತ್ತು ಪಕ್ಷದ ಹಿರಿಯ, ಕಾರ್ಯಕರ್ತರು ಉಪಸ್ಥಿತಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!