ನಿವೃತ್ತರ ಪರ ಉಚ್ಛತಮ ನ್ಯಾಯಾಲಯ – ಎಸ್. ಎಸ್. ತೋನ್ಸೆ

ಉಡುಪಿ : ಪಿಂಚಣಿದಾರರಿಗೆ ಮೂಲನಿವೃತ್ತಿ ವೇತನದ ಶೇಕಡಾ 20ರಷ್ಟು ಹೆಚ್ಚಿನ ಸೌಲಭ್ಯವನ್ನು 81ನೇ ಜನ್ಮದಿನಾಂಕದಿಂದ ಈಗ ನೀಡಲಾಗುತ್ತಿದೆ. 

ಸರಕಾರಿ ಆದೇಶದಲ್ಲಿ 80 ವರ್ಷದಿಂದ ಎಂದಿದೆ. ಆದುದರಿಂದ 80ನೇ ಜನ್ಮದಿನಾಂಕದಿಂದ ಸೌಲಭ್ಯವನ್ನು ನೀಡಲು ಆದೇಶಿಸುವಂತೆ ನಿವ್ರತ್ತರೊಬ್ಬರು ಗೌಹಾತಿ ಉಚ್ಛನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು. ಅವರು ಮನವಿಯನ್ನು, ಶಬ್ದಕೋಶದ ಅರ್ಥ ಇನ್ನಿತರ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ 81ನೇ ಹುಟ್ಟುದಿನದಿಂದ ಸೌಲಭ್ಯ ನೀಡುವುದು ಸರಿಯಲ್ಲ. ಅರ್ಜಿದಾರರು 80ನೇ ಜನ್ಮದಿನಾಂಕದಿಂದ ಸೌಲಭ್ಯಕ್ಕೆ ಅರ್ಹರು ಎಂಬುದಾಗಿ ತೀರ್ಪು ನೀಡಿದೆ.

ತೀರ್ಪಿನ ವಿರುದ್ಧ ರಾಜ್ಯ ಸರಕಾರ ರಾಷ್ಟ್ರದ ಉಚ್ಛತಮ ನ್ಯಾಯಾಲಯಕ್ಕೆ ಸಲ್ಲಿಸಿದ ಮೇಲ್ಮನವಿ ಉಚ್ಛತಮ ನ್ಯಾಯಾಲಯ ತಿರಸ್ಕರಿಸಿ ಗೌಹಾತಿ ಉಚ್ಛನ್ಯಾಯಾಲಯದ ತೀರ್ಮಾನವನ್ನು ಎತ್ತಿಹಿಡಿಯುವುದರ ಮೂಲಕ ನಿವೃತ್ತರ ಪರವಾಗಿ ಉಚ್ಛತಮ ನ್ಯಾಯಾಲಯ ತೀರ್ಪು ನೀಡಿದೆ. ಇದರಿಂದ ಈ ಸೌಲಭ್ಯಕ್ಕೆ ಆರ್ಹ ದೇಶದ ನಿವೃತ್ತರು ಒಂದು ವರ್ಷ ಮೊದಲೇ ಸೌಲಭ್ಯ ಪಡೆಯುವಂತಾಗಿರುವುದನ್ನು ನಿವೃತ್ತರ ಸಂಘದ ಕಾರ್ಯದರ್ಶಿ ಎಸ್. ಎಸ್. ತೋನ್ಸೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply