ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ ರಾಜ್ಯ ಸರಕಾರ~

ಮಳೆಯಿಂದ ಉಂಟಾದ ನೆರೆ ಸಂದರ್ಭದಲ್ಲಿ ಮನೆಯೊಳಗೆ ನೀರು ನುಗ್ಗಿದ ಸಂದರ್ಭದಲ್ಲಿ ಬಟ್ಟೆ ಬರೆ, ಗ್ರಹೋಪಯೋಗಿ ಸಾಮಾಗ್ರಿಗಳು, ಪಾತ್ರೆಗಳನ್ನು ಕಳಕೊಂಡವರಿಗೆ ರೂ.10,000/- ದಷ್ಟು ಪರಿಹಾರ ನೀಡಲು ರಾಜ್ಯ ಸರಕಾರ ಘೋಷಿಸಿದ್ದು ಅದರೊಂದಿಗೆ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಲು ರೂ.5 ಲಕ್ಷ, ಶೇ.25 ರಿಂದ 75% ರವರೆಗೆ ಮನೆ ಹಾನಿಯಾದರೆ ದುರಸ್ಥಿಗೆ 3 ಲಕ್ಷ, ಕೆಡವಿ ಹೊಸ ಮನೆ ಕಟ್ಟುವುದಾದರೆ ರೂ.5 ಲಕ್ಷ, ಶೇ15 ರಿಂದ 25% ರವರೆಗೆ, ಹಾನಿಯಾದ ಮನೆಗಳಿಗೆ ರೂ.50ಸಾವಿರ ಪರಿಹಾರ ನೀಡುವಂತೆ ರಾಜ್ಯ ಸರಕಾರ ಆದೇಶಿಸಿದೆ.

ಇದರಂತೆ ಕೂಡಲೆ ಸಂತ್ರಸ್ಥರು ಸ್ಥಳೀಯ ಗ್ರಾಮ ಕರಣಿಕರಿಗೆ ಹಾನಿಯ ಬಗ್ಗೆ 1, ಫೋಟೋ ಹಾಗು ಹಾನಿಯ ವರದಿ ಅಂದಾಜು ಮೊತ್ತ ಸೇರಿಸಿ ಪಡಿತರ ಚೀಟಿ, ಆಧಾರ್, ಬ್ಯಾಂಕ್ ಪಾಸ್ ಬುಕ್, ಮನೆತೆರಿಗೆ ರಶೀದಿ ಸಾಧ್ಯವಾದರೆ ಆರ್ ಟಿ ಸಿ ಇತ್ಯಾದಿ ದಾಖಲೆಗಳನ್ನು ಸೇರಿಸಿ ಇಂದೇ ಅರ್ಜಿ ಸಲ್ಲಿಸಿರಿ. 

ಸಂತ್ರಸ್ತರ ನೆರವಿಗೆ ರಾಜ್ಯದ ಬಿಜೆಪಿ ನೇತ್ರತ್ವದ ಸರಕಾರ ಸದಾ ಬಧ್ಧವಾಗಿದೆ ಎಂದು ಕಾಪು ವಿಧಾನ ಸಭಾ ಕ್ಷೇತ್ರದಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಸಂತೋಷ್ ಕುಮಾರ್ ಮೂಡುಬೆಳ್ಳೆ ತಿಳಿಸಿದ್ದಾರೆ 

 
 
 
 
 
 
 
 
 
 
 

Leave a Reply