ಮತ್ತೆ ಅಧಿಕಾರಕ್ಕೆರಿದ ಎನ್ ಡಿಎ

ನವದೆಹಲಿ: ಬಿಜೆಪಿ-ಜೆಡಿಯು ನೇತೃತ್ವದ ಎನ್.ಡಿ.ಎ ಮೈತ್ರಿಕೂಟ ಮತ್ತೆ ಗೆಲುವು ಸಾಧಿಸಿದೆ. ಬಿಹಾರದಲ್ಲಿ 243 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತದಲ್ಲಿದ್ದ ಎನ್.ಡಿ.ಎ, 125 ಸೀಟುಗಳನ್ನು ಗೆದ್ದುಕೊಳ್ಳುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ಏರಿದೆ.

ಮಂಗಳವಾರ, ನವೆಂಬರ್ 10 ರ ಬೆಳಿಗ್ಗೆ ಪ್ರಾರಂಭವಾದ ಮತ ಎಣಿಕೆ ಪ್ರಕ್ರಿಯೆ ಮಧ್ಯರಾತ್ರಿಯವರೆಗೂ ಸಾಗಿತ್ತು. ಈ ಚುನಾವಣೆಯಲ್ಲಿ ಎನ್.ಡಿ.ಎ ಮತ್ತು ಮಹಾಘಟಬಂಧನ್ ನಡುವೆ ಬಹು ಪೈಪೋಟಿ ಪ್ರತಿ ಸುತ್ತಿನಲ್ಲೂ ಮುಂದುವರಿದ ಹಿನ್ನೆಲೆ ಯಾರಿಗೆ ಬಹುಮತ ಎಂದು ಊಹಿಸಲು ಕಷ್ಟವಾಗಿತ್ತು.

ಅಂತಿಮವಾಗಿ ಎನ್.ಡಿ.ಎ ಮೈತ್ರಿಕೂಟ 125 ಸ್ಥಾನಗಳನ್ನು ಪಡೆದುಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆರ್.ಜೆ.ಡಿ 75 ಕ್ಷೇತ್ರಗಳಲ್ಲಿ ವಿಜಯ ಸಾಧಿಸುವ ಮೂಲಕ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಹಾಗೆ, ಮಹಾಘಟಬಂಧನ್ 110 ಸೀಟುಗಳನ್ನು ಪಡೆದುಕೊಂಡಿದೆ.

ಆರ್.ಜೆ.ಡಿ- 75, ಬಿಜೆಪಿ – 74, ಜೆಡಿಯು- 43, ಕಾಂಗ್ರೆಸ್- 19

Leave a Reply