ಮುನಿಯಾಲ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಿಂದ ಗುರುಪೂರ್ಣಿಮೆ ಮತ್ತು ವನಮಹೋತ್ಸವ ಸಪ್ತಾಹ

ಮಣಿಪಾಲ : ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮುನಿಯಾಲ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಮಣಿಪಾಲ ಇವರಿಂದ ಗುರುಪೂರ್ಣಿಮೆ ಮತ್ತು ವನಮಹೋತ್ಸವ ಸಪ್ತಾಹ ಪ್ರಯುಕ್ತ ಉಡುಪಿ ಜಿಲ್ಲೆಯ ಸಾರ್ವಜನಿಕರಿಗೆ ಉಚಿತವಾಗಿ ಉಪಯುಕ್ತ ಔಷಧೀಯ ಗಿಡಗಳ ವಿತರಣಾ ಕಾರ್ಯಕ್ರಮವನ್ನು ಜು. 24 ರಂದು ಹಮ್ಮಿಕೊಳ್ಳಲಾಗಿತ್ತು.

ವಿವಿಧ ಜಾತಿಯ ರೋಗನಿರೋಧಕ ಶಕ್ತಿಯುಳ್ಳ ಅಮೃತ , ನೆಲ್ಲಿಕಾಯಿ ಮತ್ತು ಹಣ್ಣುಹಂಪಲುಗಳಾದ ಪೇರಳೆ, ನೆಲ್ಲಿ, ಪುನರ್ಪುಳಿ ಮತ್ತು ಔಷಧೀಯ ಗಿಡಮರಗಳಾದ ಬಿಲ್ವ, ಹೊಂಗೆ , ನೇರಳೆ, ಅಂಟುವಾಳ, ಅಶೋಕ, ರೆಂಜೆ, ಕಾಡುಬಾದಾಮಿ, ತೇಗ, ಹುಣಸೆ, ಸಂಧುಬೀಳು,

ಹಿಪ್ಪಲಿ, ಕಾಳುಮೆಣಸು ಮುಂತಾದ 17 ಕ್ಕೂ ಹೆಚ್ಚು ವಿವಿಧ ಜಾತಿಗಳ ಸುಮಾರು 3000ಕ್ಕೂ ಮಿಕ್ಕಿ ಗಿಡಗಳನ್ನು 300 ಕ್ಕೂ ಅಧಿಕ ನಾಗರಿಕರಿಗೆ ಉಚಿತವಾಗಿ ವಿತರಿಸಲಾಯಿತು. ಇದೇ ಸಂದರ್ಭ ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣ ಸಾಕಷ್ಟು ಮುಂಜಾಗ್ರತೆಯನ್ನು ವಹಿಸಿಕೊಳ್ಳಲಾಗಿತ್ತು ಎಂದು ಸಂಸ್ಥೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

 
 
 
 
 
 
 
 
 
 
 

Leave a Reply