ಎಂಪಿಎಂ ತುಳುವೆರೆ ಆಟಿ ಕೂಟ

ಕಾರ್ಕಳ :-ಎಂ.ಪಿ.ಎಂ. ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ ಇಲ್ಲಿ ಆಗಸ್ಟ್ ೪ ರಂದು ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ತುಳುವೆರೆ ‘ಆಟಿ’ ತುಳುನಾಡ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮವು ನಡೆಯಿತು.

 ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಘವೇಂದ್ರ ದಾಸರು,ಕಾಲೇಜಿನ ಪ್ರಾಂಶುಪಾಲರಾದ ಡಾ.ಕಿರಣ್,ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರಾದ ಜ್ಯೋತಿ,ಸೇವಾ ಯೋಜನೆಯ ಕಾರ್ಯದರ್ಶಿ ಗಳಾದ ಧನುಷ್,ರಶ್ಮಿ, ರಕ್ಷಿತಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಘವೇಂದ್ರ ದಾಸರು ತುಳುನಾಡಿನಲ್ಲಿ ಆಟಿಯ ವಿಶೇಷತೆ, ಆಚಾರ,ವಿಚಾರಗಳು,ತುಳುನಾಡಿನ ಹಿನ್ನಲೆಯ ಕುರಿತಾಗಿ ಮಾತನಾಡಿದರು.

 ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಡಾ.ಕಿರಣ್ ರವರು ತಮ್ಮ ಅಧ್ಯಕ್ಷೀಯ ಮಾತುಗಳನ್ನಾಡಿದರು.

   ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರಾದ ಜ್ಯೋತಿ ಅವರು ಹಿಂದಿನ ಕಾಲದ ಆಟಿಯ ಅನುಭವವನ್ನು ಹಂಚಿಕೊಂಡರು.ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಶಿಕ್ಷಕ ಶಿಕ್ಷಕೇತರ ವೃಂದದವರು,ವಿದ್ಯಾರ್ಥಿಗಳು ಪ್ರತ್ಯಕ್ಷ ಸಾಕ್ಷಿಯಾದರು. ಕಾರ್ಯಕ್ರಮವನ್ನು ದೀಕ್ಷಿತ್ ರವರು ನಿರೂಪಿಸಿದರು. ಚಂದನರವರು ಸ್ವಾಗತಿಸಿದರು.ಶ್ರೇಯಾ ಹೆಗ್ಡೆ ವಂದಿಸಿದರು.

 
 
 
 
 
 
 
 
 
 
 

Leave a Reply