ಹಡಿಲು ಭೂಮಿ ಕೃಷಿ ಆಂದೋಲನ- ಮೂಡುಬೆಟ್ಟು ವಾರ್ಡಿನಲ್ಲಿ ಶಾಸಕ ರಘುಪತಿ ಭಟ್ ಸಭೆ

ಉಡುಪಿ: ಶಾಸಕ ಕೆ. ರಘುಪತಿ ಭಟ್, ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಹಮ್ಮಿಕೊಂಡಿರುವ “ಹಡಿಲು ಭೂಮಿ ಕೃಷಿ ಆಂದೋಲನ” ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಶುಕ್ರವಾರದಂದು ನಗರಸಭಾ ವ್ಯಾಪ್ತಿಯ ಮೂಡುಬೆಟ್ಟು ವಾರ್ಡಿನಲ್ಲಿ ಸಭೆ ನಡೆಸಲಾಯಿತು.

ಶಾಸಕರು ಮಾತನಾಡಿ ಕೃಷಿ ಮಾಡದೆ ಭೂಮಿಯನ್ನು ಹಡಿಲು ಬಿಟ್ಟರೆ ದೇಶದ ಆರ್ಥಿಕತೆಗೆ ನಷ್ಟವಾಗುತ್ತದೆ. ಹಡಿಲು ಬಿಡುವುದರಿಂದ ಅಂತರ್ಜಲ ಮಟ್ಟ ಕುಸಿದು ಕೆರೆ ಬಾವಿಗಳಲ್ಲಿನ ನೀರು ಬೇಗನೆ ಆವಿಯಾಗುತ್ತದೆ. ಹಾಗಾಗಿ ನಾವೆಲ್ಲರೂ ಹಡಿಲು ಭೂಮಿಯನ್ನು ಸಾವಯವ ಕೃಷಿ ಮಾಡುವುದಾಗಿ ಸಂಕಲ್ಪ ಮಾಡಬೇಕು. ಮೂಡುಬೆಟ್ಟು ವಾರ್ಡಿನ ಯುವಕರು, ಸಂಘ-ಸಂಸ್ಥೆಯವರು, ಕೃಷಿಯಲ್ಲಿ ಆಸಕ್ತಿ ಇರುವವರನ್ನು ಒಟ್ಟುಗೂಡಿಸಿಕೊಂಡು ಸಾವಯವ ಕೃಷಿ ಮಾಡಬೇಕೆಂದರು. ಸಾಗುವಳಿ ಮಾಡಲು ಬೇಕಾಗುವ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

 ನಗರ ಸಭಾ ಸದಸ್ಯ ಶ್ರೀಶ ಕೊಡವೂರು, ಮಂಜುನಾಥ್ ಮಣಿಪಾಲ್, ನಗರ ಸಭೆಯ ಮಾಜಿ ಸದಸ್ಯ ಸುರೇಶ್ ಶೆಟ್ಟಿ, ಹಿರಿಯ ರೈತರಾದ ಬೂದ ಪೂಜಾರಿ, ಮೂಡುಬೆಟ್ಟು ಯುವಕರ ಮಂಡಲ ಅಧ್ಯಕ್ಷ ಜಗದೀಶ್ ಅಮೀನ್, ಸ್ಥಳೀಯ ಪ್ರಮುಖ ಶಂಕರ್ ಮದ್ವನಗರ, ನಿಟ್ಟೂರು ಪ್ರೌಢ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಮುರಳಿ ಕಡೆಕಾರ್ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ಕ್ಷೇತ್ರ ಅಧಿಕಾರಿ ಶಂಕರ್ ಮತ್ತು ಪಕ್ಷದ ಹಿರಿಯರು, ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply