ಜನಾರ್ದನ ಅಡಿಗರಿಗೆ ಗೌರವಾಭಿನಂದನೆ

ದಿನಾಂಕ 26ಜೂನ್ ಬುಧವಾರದಂದು ಲಾಲ್ ಬಹದ್ದೂರ್ ಗಣಪತಿ ರಾವ್ ಸ್ಮಾರಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೊಗೇರಿ ಯಲ್ಲಿ ವಿವೇಕ ಕಟ್ಟಡ ಮತ್ತು ಶಾಲಾ ಕೈ ತೋಟ ಉದ್ಘಾಟನೆ ಸಮಾರಂಭ ನೆರವೇರಿತು.

ಮಾನ್ಯ ಶಾಸಕರಾದ ಶ್ರೀ ಗುರುರಾಜ ಗಂಟಿಹೊಳೆ ಕಟ್ಟಡವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸರಕಾರಿ ಶಾಲೆಗಳ ಉನ್ನ ತಿಕರಣದಲ್ಲಿ ಸಹಕರಿಸಿದ ಊರ ಪರ ಊರ ಮಹನೀಯರನ್ನುಸ್ಮರಿಸಿದರು.

ಕೈ ತೋಟದ ಉದ್ಘಾಟನೆ ಮಾಡಿದ ಡಾ. ಎ. ಎಸ್ ಉಡುಪ ಮಂದಾರ ಕ್ಲಿನಿಕ್ ಉಪ್ಪುಂದರವರು ಪ್ರಾಕೃತಿಕ ಸಂಪತ್ತಿನ ರಕ್ಷಣೆ ಮತ್ತು ವಿದ್ಯಾರ್ಥಿ ಗಳ ಜವಾಬ್ಧಾರಿಯನ್ನು ಮನದಟ್ಟು ಮಾಡಿದರು. ಕ್ಷೇತ್ರ ಶಿಕ್ಷಣ ಅಧಿಕಾರಿ ಶ್ರೀ ನಾಗೇಶ ನಾಯಕ್ ಅವರು ವಿದ್ಯಾರ್ಥಿ ಗಳಿಗೆ ನಿರಂತರ ಕಲಿಕಾ ಚಟುವಟಿಕೆ ಯ ಮಹತ್ವವನ್ನು ವಿವರಿಸಿದರು. ಶಾಲೆಯ ಸರ್ವತೋಮುಖ ಅಭಿವೃದ್ಧಿ ಗಾಗಿ ಕೊಡುಗೆ ನೀಡಿದ 1984/85 ರ ವಿದ್ಯಾರ್ಥಿ ಶ್ರೀ ಜನಾರ್ಧನ ಅಡಿಗರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯ ರಾದ ಶ್ರೀಮತಿ ವಿಶಾಲಾಕ್ಷಿ ಮತ್ತು ಅಧ್ಯಾಪಕ ವೃಂದದವರು ಕಾರ್ಯಕ್ರಮ ನಿರ್ವಹಣೆ ಮಾಡಿದರು.

 
 
 
 
 
 
 
 

Leave a Reply