ಮಂಗಳೂರು ವಿಭಾಗವನ್ನು ನ್ಯೆರುತ್ಯ ರೈಲ್ವೆಯ ಮ್ಯೆಸೂರು ವಿಭಾಗದೊಂದಿಗೆ ಸೇರ್ಪಡೆಗೊಳಿಸಲು ಎಸ್. ಎಸ್. ತೋನ್ಸೆ ಮನವಿ

ಉಡುಪಿ : ಜಾರ್ಜ್ ಫರ್ನಾಂಡಿಸ್ ರೈಲ್ವೆ ಸಚಿವರಾಗಿದ್ದಾಗ ಅವರ ದೂರಾಲೋಚನೆಯ ಫಲವಾಗಿ ಕೊಂಕಣ ರೈಲ್ವೆ ನಿಗಮ ಅಸ್ತಿತ್ವಕ್ಕೆ ಬಂತು. ಆದರೆ ಇದಕ್ಕೆ ಭಾರತೀಯ ರೈಲ್ವೆಯಿಂದ ವಿಂಗಡಿಸಿದ ಒಂದೇ ಒಂದು ರೈಲು ಡಬ್ಬಿ, ರೈಲುಗಾಡಿ ಎಳೆಯುವ ಯಂತ್ರ ಇಲ್ಲವೆಂಬುದು ಯಾತ್ರಿಕರಿಗೆ ಗೊತ್ತಿದಂತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ತೋಕೂರಿನಿಂದ ಮಹಾರಾಷ್ಟ್ರದ ರೋಹದೊರಿಗಿನ ರೈಲು ದಾರಿ ಕೊಂಕಣ ರೈಲ್ವೆಯದ್ದು.

ಈ ರೈಲು ದಾರಿಯ ಉಸ್ತುವಾರಿ, ರೈಲು ಸುರಕ್ಷಿತವಾಗಿ ಓಡಲು ಸಂಜ್ಞೆಯನ್ನು ನೀಡುವುದರ ಮೂಲಕ ಭಾರತೀಯ ಪ್ರಯಾಣಿಕರ ರೈಲು, ಮಾಲುಗಾಡಿ ಸುರಕ್ಷಿತವಾಗಿ ಓಡಾಡುತ್ತಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಕೊಂಕಣ ರೈಲ್ವೆ ಸಿಬ್ಬಂದಿ ವರ್ಗದವರದ್ದು. ಆದ ಕಾರಣ ಕೊಂಕಣ ರೈಲ್ವೆ ದಾರಿ ಪ್ರದೇಶದವರಿಗೆ ಭಾರತೀಯ ರೈಲ್ವೆಯಿಂದ ಅಗತ್ಯ ಸೌಲಭ್ಯಗಳು ಸಿಗಲು ಸಮಸ್ಯೆಯಾಗುತ್ತದೆ. ನಿಧಾನವಾಗುತ್ತದೆ. ಜನಹಿತದ್ರಷ್ಟಿಯಿಂದ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಿ, ಮಂಗಳೂರು ವಿಭಾಗವನ್ನು ನ್ಯೆರುತ್ಯ ರೈಲ್ವೆಯ ಮ್ಯೆಸೂರು ವಿಭಾಗದೊಂದಿಗೆ ಸೇರ್ಪಡೆಗೊಳಿಸುವಂತೆ ಕೇಂದ್ರ ಸರ್ಕಾರದ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ನಳಿನ್ ಕುಮಾರ್ ಕಟೀಲು ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿರುವುದು ಸಂತೋಷದ ವಿಚಾರ. 

ಇದು ಶೀಘ್ರ ಕಾರ್ಯಗತವಾಗುವಂತೆ ಮಾಡಲು ಅವರೊಂದಿಗೆ ಕೊಂಕಣ ರೈಲು ಪ್ರದೇಶದ ಎಲ್ಲಾ ಜನಪ್ರತಿನಿಧಿಗಳು ಸಹಕರಿಸುವಂತೆ ಉಡುಪಿ ರೈಲ್ವೆ ಯಾತ್ರಿಕರ ಸಂಘದ ಸಮಿತಿಯ ಮಾಜಿ ಸದಸ್ಯ ಎಸ್. ಎಸ್. ತೋನ್ಸೆ ಮನವಿ ಮಾಡಿದ್ದಾರೆ.

 
 
 
 
 
 
 
 
 
 
 

Leave a Reply