ಜಿಲ್ಲಾ ಲೈಸೆನ್ಸ್ ಸರ್ವೆಯರ್ ಸಮಸ್ಯೆ ಬಗೆಹರಿಸುವಂತೆ ಶಾಸಕ ರಘುಪತಿ ಭಟ್ ಗೆ ಜಿಲ್ಲಾ ಲೈಸೆನ್ಸ್ ಸರ್ವೇಯರ್ ಸಂಘದಿಂದ ಮನವಿ

ಉಡುಪಿ: ಸರ್ವೆ ವಿಭಾಗದಲ್ಲಿನ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಕಳೆದ ಎರಡು ತಿಂಗಳಿನಿಂದ ಲೈಸೆನ್ಸ್ ಸರ್ವೆಯವರು ಮುಷ್ಕರ ನಡೆಸುತ್ತಿದ್ದು, ಸಮಸ್ಯೆಗಳನ್ನು ಶೀಘ್ರ ಪರಿಹರಿಸುವಂತೆ ಇಂದು ಉಡುಪಿ ಜಿಲ್ಲಾ ಲೈಸನ್ಸ್ ಸರ್ವೆ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಶಾಸಕ ಶ್ರೀ ಕೆ ರಘುಪತಿ ಭಟ್ ರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಲೈಸೆನ್ಸ್ ಸರ್ವೆಯವರ ಸಮಸ್ಯೆಗಳಾದ ಪೋಡಿಮುಕ್ತ ಹಣ ಬಾಕಿ ಮತ್ತು 2013 ರಿಂದ ಸಾರ್ವಜನಿಕರಿಂದ ಕಟ್ಟಿಸಿಕೊಂಡ ತತ್ಕಾಲ್ ಪೋಡಿ ಒಂದು ಕಡತಕ್ಕೆ ನೀಡಬೇಕಿದ್ದ ರೂ. 800/- ನ್ನು ಇದುವರೆಗೂ ಪಾವತಿಸಿಲ್ಲ. 11E ನಕ್ಷೆ ಅಡಿಯಲ್ಲಿ ಅಲಿನೇಷನ್, ವಿಭಾಗ, ಕ್ರಯ, ಇಂತಹ ಅಳತೆ ಪ್ರಕರಣಗಳಲ್ಲಿ ವಿಲೇ ತಕರಾರುವಿನಲ್ಲಿ ಅಪ್ಲೋಡ್ ಮಾಡಿದ ಕಡತಗಳ ಸಂಭಾವನೆ ಬಾಕಿ ಉಳಿಸಿ ಕೊಂಡಿರುತ್ತಾರೆ. ಈ ಸಮಸ್ಯೆಗಳನ್ನು ಪರಿಹರಿಸಿ ಹಣ ಪಾವತಿ ಹಾಗೂ ಸಂಭಾವನೆ ನೀಡುವಂತೆ ಒತ್ತಾಯಿಸಿ ಕಳೆದ ಎರಡು ತಿಂಗಳಿನಿಂದ ಜಿಲ್ಲಾ ಲೈಸೆನ್ಸ್ ಸರ್ವೆಯವರು ಮುಷ್ಕರ ನಡೆಸುತ್ತಿದ್ದಾರೆ. ಇವರ ಮುಷ್ಕರದಿಂದಾಗಿ ಉಡುಪಿ ಜಿಲ್ಲೆಯಲ್ಲಿ 8 ಸಾವಿರಕ್ಕೂ ಅಧಿಕ ಕಡತಗಳು ಬಾಕಿ ಉಳಿದಿದೆ.

ತಮ್ಮ ಸಮಸ್ಯೆಗಳನ್ನು ಪರಿಹರಿಸಿ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು. ಇವರ ಮನವಿಗೆ ಸ್ಪಂದಿಸಿದ ಶಾಸಕ ಶ್ರೀ ಕೆ. ರಘುಪತಿ ಭಟ್, ಈ ಸಂಬಂಧ ಅಧಿಕಾರಿಗಳೊಂದಿಗೆ ಹಾಗೂ ರಾಜ್ಯ ಪದಾಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

 
 
 
 
 
 
 
 
 
 
 

Leave a Reply