Janardhan Kodavoor/ Team KaravaliXpress
26.6 C
Udupi
Monday, January 30, 2023
Sathyanatha Stores Brahmavara

ಮಲ್ಪೆ: ಮೆಹೆಂದಿ ಕಾರ್ಯಕ್ರಮದಲ್ಲಿ ಅವಧಿಗೂ ಮೀರಿ ಡಿಜೆ-ದೂರು ದಾಖಲು

ಮಲ್ಪೆ: ಕೊಡವೂರು ಗ್ರಾಮದ ಮದ್ವನಗರ ಪರಿಸರದಲ್ಲಿ ನಡೆಯುತ್ತಿದ್ದ ಮೆಹಂದಿ ಕಾರ್ಯಕ್ರಮ ದಲ್ಲಿ ಅವಧಿ ಮೀರಿ ಯಾವುದೇ ಪೂರ್ವಾನುಮತಿ ಇಲ್ಲದೆ ಡಿ.ಜೆ ಸೌಂಡ್ ನ್ನು ಹಾಕಿ ಕಾರ್ಯಕ್ರಮ ನಡೆಸಿರುವುದರ ವಿರುದ್ಧ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೊಡವೂರು ಗ್ರಾಮದ ಮದ್ವನಗರದಲ್ಲಿ ನಡೆಯುತ್ತಿದ್ದ ಮೆಹಂದಿ ಕಾರ್ಯಕ್ರಮದಲ್ಲಿ ಡಿ.ಜೆ ಸೌಂಡ್ ಹಾಕಿ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ ಎಂಬ ದೂರಿನ ಮೇರೆಗೆ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ಪೊಲೀಸರು ಸ್ಥಳಕ್ಕೆ ತೆರಳಿ ನೋಡಿದಾಗ ಮದ್ವನಗರ ನಿವಾಸಿ ಕಿಶನ್ ಎಂಬವರ ಮನೆಯಲ್ಲಿ ಮದುವೆಯ ಮೆಹಂದಿ ಕಾರ್ಯಕ್ರಮದಲ್ಲಿ ಅತೀ ಕರ್ಕಶವಾದ ಡಿ ಜೆ ಸೌಂಡ್ ಹಾಕಿ ಕೊಂಡು ಕಾರ್ಯ ಕ್ರಮವನ್ನು ತಡ ರಾತ್ರಿವರೆಗೂ ನಡೆಸುತ್ತಿದ್ದು ಕಂಡು ಬಂದಿದೆ. ಈ ವಿಚಾರವಾಗಿ ಪೂರ್ವಾನುಮತಿ ಪಡೆದುಕೊಂಡಿರುವ ಬಗ್ಗೆ ವಿಚಾರಿಸಿದಾಗ ಕಿಶಾನ್ ಅವರು ಯಾವುದೇ ಪೂರ್ವಾನುಮತಿ ಅಥವಾ ಪರವಾನಿಗೆಯನ್ನು ಪಡೆದುಕೊಂಡಿರುವುದಿಲ್ಲ ಎಂದು ತಿಳಿಸಿದ್ದಾರೆ. ಹಾಗೂ ಕಾರ್ಯಕ್ರಮದಲ್ಲಿ ಡಿ ಜೆಯ ಬಗ್ಗೆ ವಿಚಾರಿಸಿದಾಗ ತೊಟ್ಟಂ ನಾಗರಾಜರವರ ಡಿ.ಜೆ ಆಗಿರವುದಾಗಿ ತಿಳಿಸಿರುತ್ತಾರೆ. ಅರೋಪಿತರು ಯಾವುದೇ ಪರವಾನಿಗೆ ಇಲ್ಲದೇ ತಡ ರಾತ್ರಿವರೆಗೆ ದ್ವನಿವರ್ದಕವನ್ನು ಅತೀ ಕರ್ಕಶವಾಗಿ ಸಾರ್ವಜನಿಕರಿಗೆ ಉಪದ್ರವಾಗುವ ರೀತಿಯಲ್ಲಿ ಬಳಸಿ ಸಾರ್ವಜನಿಕರಿಗೆ ತೊಂದರೆವುಂಟುಮಾಡಿರುವುದಾಗಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!