ಮಲ್ಪೆ ಮೀನುಗಾರರ ಮೇಲೆ ಗೂಂಡಾಗಿರಿ ನಡೆಸಿದ ತಮಿಳುನಾಡು ಮೀನುಗಾರರು

ಉಡುಪಿ: ಕಾನೂನುಬಾಹಿರವಾಗಿ ಮೀನುಗಾರಿಗೆ ನಡೆಸುತ್ತಿದ್ದ ತಮಿಳುನಾಡು ಮೀನುಗಾರರನ್ನು ಪ್ರಶ್ನಿಸಿದ್ದಕ್ಕೆ ಮಲ್ಪೆ ಮೀನುಗಾರರ ಮೇಲೆ ದಾಳಿ ನಡೆಸಿದ ಘಟನೆ ಗುರುವಾರ ನಡೆದಿದೆ.

ತಮಿಳುನಾಡಿನ ಮೀನುಗಾರರು ಮೂರು ದೋಣಿಗಳಲ್ಲಿ ಲೈಟ್ ಅಳವಡಿಸಿ ಕಾನೂನುಬಾಹಿರವಾಗಿ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು. ಇದನ್ನು ಗಮನಿಸಿದ ಮಲ್ಪೆ ಮೀನುಗಾರರು ಆಕ್ಷೇಪಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಗೂಂಡಾ ವರ್ತನೆ ತೊರಿದ ತಮಿಳುನಾಡಿನ ಮೀನುಗಾರರು ಮಲ್ಪೆಯ ಬೋಟ್ ಗಳಿಗೆ ಹಾನಿ ಮಾಡಿದ್ದಾರೆ.

ಸದ್ಯ ಈ ಹಿನ್ನೆಲೆಯಲ್ಲಿ ಮಲ್ಪೆ ಮೀನುಗಾರರಿಂದ ಪ್ರತಿಭಟನೆ ಆರಂಭವಾಗಿದ್ದು, ಮಲ್ಪೆ ಮೀನುಗಾರಿಕೆ ಬಂದರಿನಿಂದ ಸಮುದ್ರ ಮೀನುಗಾರಿಕೆಗೆ ಹೋದ ಎಲ್ಲ ದೋಣಿಗಳು ಹಿಂತಿರುಗಿವೆ. ಈ ವೇಳೆ ತಮ್ಮ ದೋಣಿಗೆ ಹಾನಿ ಮಾಡಿದ ತಮಿಳುನಾಡು ಮೀನುಗಾರರನ್ನು ಕೂಡ ಮಲ್ಪೆ ಬಂದರಿಗೆ ಕರೆತಂದು ಮುತ್ತಿಗೆ ಹಾಕಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕರಾವಳಿ‌ ಕಾವಲು ಪೊಲೀಸರು ದೌಡಾಯಿಸಿದ್ದಾರೆ.

 
 
 
 
 
 
 
 
 
 
 

Leave a Reply