ಆನಂದ ಪುತ್ರನ್‌ರ ಸರಳ ಸಜ್ಜನಿಕೆಯ ಮೇರು ವ್ಯಕ್ತಿತ್ವ ಆದರ್ಶಮಯ : ಜಯ ಸಿ. ಕೋಟ್ಯಾನ್

ಸರಳ ಸಜ್ಜನಿಕೆಯ ವ್ಯಕ್ತಿತ್ವದ ಆನಂದ ಪುತ್ರನ್ ಧಾರ್ಮಿಕ ಸಾಮಾಜಿಕ ಸಹಕಾರ ಕ್ಷೇತ್ರದಲ್ಲಿನ ತಮ್ಮ ಕಾರ್ಯವೈಖರಿಯ ಮೂಲಕ ನಮಗೆಲ್ಲ ಆದರ್ಶಪ್ರಾಂiÀiರಾಗಿದ್ದು, ತಮ್ಮ ನಾಯಕತ್ವದ ಗುಣದಿಂದ ಮೀನುಗಾರ ಸಮುದಾಯದ ಮುಂದಾಳುವಾಗಿ ಗುರುತಿಸಿಕೊoಡಿದ್ದ ಆನಂದ ಪುತ್ರನ್ ನಿಧನದಿಂದ ಮೊಗವೀರ ಸಮಾಜ ಒಂದು ಮೇರು ವ್ಯಕ್ತಿತ್ವವನ್ನು ಕಳೆದುಕೊಂಡಿದೆ ಎoದು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ
ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್ ಹೇಳಿದರು.

ಉಡುಪಿ ಪುರಭವನದಲ್ಲಿ ಆಯೋಜಿಸಿದ್ದ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಮಾಜಿ ಅಧ್ಯಕ್ಷ ಆನಂದ ಪುತ್ರನ್ ರವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷರಾದ ದಯಾನಂದ ಕೆ. ಸುವರ್ಣ ಮಾತನಾಡಿ ಮಹಾಲಕ್ಷ್ಮೀ ಬ್ಯಾಂಕ್ ಮುಖಾಂತರ ಸಾವಿರಾರು ಮೀನುಗಾರರಿಗೆ
ಸಾಲ ಸೌಲಭ್ಯ ನೀಡಿ ಆರ್ಥಿಕ ಚೈತನ್ಯ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಅಷ್ಟ ಮಠಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹಿಂದೂತ್ವದ ವಿಚಾರದಲ್ಲೂ ದಿಟ್ಟ ನಿಲುವು ಹೊಂದಿದ್ದ ಆನಂದ ಪುತ್ರನ್, ತಮ್ಮ ಪುತ್ರ ಯಶ್‌ಪಾಲ್
ಸುವರ್ಣರಿಗೂ ಹಿಂದುತ್ವ ವಿಚಾರದಲ್ಲಿ ರಾಜೀಯಾಗದ ಬದ್ಧತೆಗೆ ಪ್ರೇರಣೆ ನೀಡಿದ್ದಾರೆ ಎಂದು ಧಾರ್ಮಿಕ ಮುಂದಾಳು ವಾಸದೇವ ಭಟ್ ಪೆರಂಪಳ್ಳಿ ಹೇಳಿದರು.

ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನ ವೃತ್ತಿಪರ ನಿರ್ದೇಶಕರಾದ ಮಂಜುನಾಥ ಎಸ್. ಕೆ. ಮಾತನಾಡಿ ಮಹಾಲಕ್ಷೀ ಬ್ಯಾಂಕಿನೊoದಿಗೆ ಸುದೀರ್ಘ 32 ವರ್ಷಗಳಲ್ಲಿ ಕ್ರಿಯಾಶೀಲರಾಗಿ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿ, ಇಂದು ಬ್ಯಾಂಕ್
ಸರ್ವಾoಗೀಣ ಪ್ರಗತಿಯೊಂದಿಗೆ ಉತ್ತಮ ಬ್ಯಾಂಕ್ ಎಂಬ ಹಿರಿಮೆಗೆ ಪಾತ್ರವಾಗುವಲ್ಲಿ ಇವರ ಸೇವೆ ಅನನ್ಯ ಎಂದು ನುಡಿ ನಮನ ಸಲ್ಲಿಸಿದರು.

ಸಮಾರಂಭದಲ್ಲಿ ನಾಡೋಜ ಡಾ. ಜಿ. ಶಂಕರ್, ಶಾಸಕರಾದ ಕೆ. ರಘುಪತಿ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿ. ಎಂ. ಸುಕುಮಾರ್
 ಶೆಟ್ಟಿ, ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಮಂಜುನಾಥ ಭಂಡಾರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಮೈಸೂರು
ಎಲೆಕ್ಟ್ರಿಕಲ್ ಇಂಡಸ್ಟ್ರೀಸ್  ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ, ಸತ್ಯಜಿತ್ ಸುರತ್ಕಲ್, ಉದ್ಯಮಿಗಳಾದ ಆನಂದ ಸಿ. ಕುಂದರ್, ಆನಂದ ಪಿ. ಸುವರ್ಣ, ಭುವನೇಂದ್ರ ಕಿದಿಯೂರು, ಜರ‍್ರಿ ವಿನ್ಸೆಂಟ್ ಡಯಾಸ್, ಆದರ್ಶ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ| ಜಿ. ಎಸ್. ಚಂದ್ರಶೇಖರ್, ಆರ್ ಎಸ್ ಎಸ್ ಪ್ರಮುಖರಾದ ನಾರಾಯಣ ಶೆಣೈ, ಬಿಜೆಪಿ
ಮುಖಂಡರಾದ ಸುರೇಶ್ ನಾಯಕ್ ಕುಯಿಲಾಡಿ,ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಪ್ರಸಾದ್ ಬೆಳ್ತಂಗಡಿ, ರಾಘವೇಂದ್ರ ಕಿಣಿ, ಮಹೇಶ್ ಠಾಕೂರ್, ರಶ್ಮಿ ಸಿ. ಭಟ್, ಅಲೆವೂರು ಶ್ರೀಕಾಂತ ನಾಯಕ್, ಜಗದೀಶ್ ಶೇಣವ, ವೀಣಾ ಶೆಟ್ಟಿ, ಗೀತಾಂಜಲಿ ಸುವರ್ಣ, ವೀಣಾ ನಾಯ್ಕ್, ಶಿಲ್ಪಾ ಜಿ. ಸುವರ್ಣ, ಶ್ರೀಶ ನಾಯಕ್, ದಿನಕರ ಬಾಬು, ಶ್ಯಾಮಲ ಕುಂದರ್, ಶೀಲ ಕೆ. ಶೆಟ್ಟಿ, ಬಿ. ಎನ್. ಶಂಕರ ಪೂಜಾರಿ, ದಿನಕರ ಶೆಟ್ಟಿ ಹೆರ್ಗ, ಕಿರಣ್ ಕುಮಾರ್ ಬೈಲೂರು, ಅಂಡಾರು ದೇವಿಪ್ರಸಾದ್ ಶೆಟ್ಟಿ, ವಿವೇಕಾನಂದ ಡಬ್ಬಿ, ಕುಮಾರ್ ರಾಮ ಚಂದ್ರಪ್ಪ, ವಿಠಲ ಪೂಜಾರಿ ಸಾಸ್ತಾನ, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಬಾಲಾಜಿ,
ಕಾಂಗ್ರೆಸ್ ಮುಖಂಡರಾದ ದಿನೇಶ್ ಪುತ್ರನ್, ಜನಾರ್ಧನ ತೋನ್ಸೆ, ಪ್ರಸಾದ್ ರಾಜ್ ಕಾಂಚನ್, ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರ, ಹಿಂದೂ ಯುವ ಸೇನೆ ಮುಖಂಡರಾದ ಭಾಸ್ಕರಚಂದ್ರ ಶೆಟ್ಟಿ, ಯಕ್ಷಗಾನ ಕಲಾರಂಗದ ಗಂಗಾಧರ ರಾವ್, ಮುರಳಿ
ಕಡೆಕಾರ್, ಮೀನುಗಾರ ಮುಖಂಡರಾದ ಸಾಧು ಸಾಲ್ಯಾನ್, ರಾಮಚಂದ್ರ ಕುಂದರ್, ಹರಿಯಪ್ಪ ಕೋಟ್ಯಾನ್, ವಾಸುದೇವ ಸಾಲ್ಯಾನ್, ಗುಂಡು ಅಮೀನ್, ಮೋಹನ್ ಬೆಂಗ್ರೆ, ಶಶಿ ಬೆಂಗ್ರೆ, ಸತೀಶ್ ಕುಂದರ್, ನಾಗರಾಜ ಸುವರ್ಣ, ಸುಭಾಸ್ ಮೆಂಡನ್, ಗಣ್ಯರಾದ ಡಾ.
ಪ್ರಶಾಂತ್ ಶೆಟ್ಟಿ ಕಾಪು, ಯೋಗೀಶ್ ಚಂದ್ರಧಾರ, ದಿವಾಕರ ಸನಿಲ್, ರವೀಂದ್ರನಾಥ ಜಿ. ಹೆಗ್ಡೆ ಪಡುಬಿದ್ರೆ, ಜಯರಾಜ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕ ಸತೀಶ್‌ಚಂದ್ರ ಶೆಟ್ಟಿ ಚಿತ್ರಪಾಡಿ ನಿರೂಪಿಸಿದರು.

 
 
 
 
 
 
 
 
 
 
 

Leave a Reply