ಶ್ರೀ ಕೃಷ್ಣಮಠದ ಮಧ್ವಮಂಟಪದಲ್ಲಿ “ಶ್ರೀಭಗವದ್ಗೀತಾ” ಪ್ರವಚನ

ಶ್ರೀ ಕೃಷ್ಣಮಠದ ಮಧ್ವಮಂಟಪದಲ್ಲಿ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಆಶ್ರಯದಲ್ಲಿ,ಗೀತಾ ಜಯಂತಿ ಪ್ರಯುಕ್ತ, ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರ ಅನುಗ್ರಹದೊಂದಿಗೆ,ಬೆಂಗಳೂರಿನ ವಿದ್ವಾನ್ ಬ್ರಹ್ಮಣ್ಯಾಚಾರ್ಯರಿಂದ “ಶ್ರೀಭಗವದ್ಗೀತಾ”(ಹದಿನೆಂಟು ಅಧ್ಯಾಯ)
 ಪ್ರವಚನವು,ಉಡುಪಿಯ ಕಿದಿಯೂರು ಹೋಟೆಲ್ಸ್ ನ ಮಾಲಕರಾದ ಭುವನೇಂದ್ರ ಕಿದಿಯೂರು ಇವರಿಂದ 25 ನೇ ವರ್ಷದ ಪ್ರಯೋಜಕತ್ವದೊಂದಿಗೆ ಪ್ರಾರಂಭಗೊಂಡಿತು.ಈ ಸಂದರ್ಭದಲ್ಲಿ ಭುವನೇಂದ್ರ ಕಿದಿಯೂರು,ಜಿತೇಶ್ ಕಿದಿಯೂರು,ಮಠದ ದಿವಾನರಾದ ವರದರಾಜ ಭಟ್,ವಿದ್ವಾನ್ ಗೋಪಾಲಕೃಷ್ಣ ಉಪಾಧ್ಯಾಯ,ಪ್ರವಚನಕಾರರಾದ  ವಿದ್ವಾನ್ ಬ್ರಹ್ಮಣ್ಯಾಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

Leave a Reply