ಸಿದ್ದು ಬೌದ್ಧಿಕ ದಿವಾಳಿತನ ಅನಾವರಣ: ಕುಯಿಲಾಡಿ ಸುರೇಶ್ ನಾಯಕ್

ಜಗತ್ತಿನ ಅತೀ ದೊಡ್ಡ ರಾಜಕೀಯ ಪಕ್ಷ ಬಿಜೆಪಿಯ ಕ್ರಿಯಾಶೀಲ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಪಕ್ಷದ ಯಶಸ್ಸಿನ ನಾಗಾಲೋಟವನ್ನು ಸಹಿಸದ ಮಾಜಿ ಸಿ.ಎಂ. ಸಿದ್ದರಾಮಯ್ಯ ತನ್ನ ಎಲ್ಲೆ ಮೀರಿದ ವರ್ತನೆಯಿಂದ ನಗೆ ಪಾಟಲಿಗೀಡಾಗಿದ್ದು, ನಳಿನ್ ಕುಮಾರ್ ಒಬ್ಬ ಕಾಡು ಮನುಷ್ಯ ಎನ್ನುವ ಮೂಲಕ ತನ್ನ ಬೌದ್ಧಿಕ ದಿವಾಳಿತನವನ್ನು ಪ್ರದರ್ಶಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಅಧಿಕಾರದ ಲಾಲಸೆ ಮತ್ತು ಸ್ವಯಂ ಸ್ವಾರ್ಥ ಸಾಧನೆಗಾಗಿ ಪಕ್ಷದಿಂದ ಪಕ್ಷಕ್ಕೆ ಹಾರುತ್ತಾ ಬಂದಿರುವ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಲ್ಲಿ ಪ್ರಸಕ್ತ ತನ್ನ ಪ್ರಾಮುಖ್ಯತೆ ಕಳೆದುಕೊಂಡಿದ್ದು ಮೂಲೆಗುಂಪಾಗುವ ಬೀತಿಯಿಂದ ಮಾನಸಿಕ ಖಿನ್ನತೆ ಗೊಳಗಾಗಿರುವಂತೆ ಕಾಣುತ್ತಿದೆ. ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಹಿಂದೂಗಳಿಗೆ ಕೊಲೆ ಭಾಗ್ಯ ನೀಡಿ, ಒಂದೇ ವರ್ಗದ ಓಲೈಕೆಗೆ ನಿಂತಿದ್ದ ಸಿದ್ದರಾಮಯ್ಯಗೆ ಸಂಸ್ಕಾರ, ಸಂಸ್ಕೃತಿ ಬಗ್ಗೆ ಇತರರಿಗೆ ಪಾಠ ಮಾಡುವ ನೈತಿಕತೆ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಬಾಯ್ತೆರೆದರೆ ವಿಪಕ್ಷ ನಾಯಕರ ಬಗ್ಗೆ ವಾಮಾಗೋಚರವಾಗಿ ಮಾತನಾಡುವ ಸಿದ್ದು ಕೀಳು ಮನಸ್ಥಿತಿ ನಾಗರಿಕ ಸಮಾಜಕ್ಕೆ ಭೂಷಣವೆನಿಸದು. ಯಥಾ ರಾಜಾ ತಥಾ ಪ್ರಜಾ ಎಂಬಂತೆ ಗುಲಾಮಗಿರಿಯ ಸಂಕೇತದಂತಿರುವ ಕಾಂಗ್ರೆಸ್ ಪಕ್ಷದಲ್ಲಿ ವರಿಷ್ಠರನ್ನು ಖುಷಿ ಪಡಿಸುವ ಭರದಲ್ಲಿ ಪದೇ ಪದೇ ಎಡವುತ್ತಿರುವ ಸಿದ್ದು ತನ್ನ ಎಡಬಿಡಂಗಿ ವರ್ತನೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಉತ್ತಮ.

ದೇಶ ಭಕ್ತ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗರಡಿಯಲ್ಲಿ ಪಳಗಿರುವ ನಳಿನ್ ಕುಮಾರ್ ಕಟೀಲ್ ವಿಚಾರದಲ್ಲಿ ತಲೆಕೆಡಿಸಿಕೊಂಡು ಹತಾಶರಾಗುವ ಬದಲು ಸಿದ್ದು ಕಾಂಗ್ರೆಸ್ ನಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸಲಿ ಎಂದು ಕುಯಿಲಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 

Leave a Reply