ಕುಂದಗನ್ನಡ ಪ್ರಾಂತ್ಯ ಅವಗಣನೆ : ಹೋರಾಟಕ್ಕೆ ಅಣಿಯಾದ ಕುಂದ ಗನ್ನಡಿಗರು

ಕನ್ನಡ ಭಾಷೆಯಲ್ಲಿಯೇ ಅತ್ಯಂತ ವಿಶಿಷ್ಟವಾದ ಗ್ರಾಮೀಣ ಸೊಗಡನ್ನು ಹೊಂದಿರುವ ಭಾಷೆ ಕುಂದ ಗನ್ನಡವಾಗಿದ್ದು, ಈ ಕುಂದಾಗನ್ನಡ ಭಾಷೆಯು ನಾಲ್ಕು (ಕುಂದಾಪುರ, ಹೆಬ್ರಿ, ಬ್ರಹ್ಮಾವರ, ಬೈಂದೂರು) ತಾಲೂಕಿನ ಕೆಲವು ಭಾಗಗಳಲಿದ್ದು, ಪಶ್ಚಿಮಕ್ಕೆ ಕಲ್ಯಾಣಾಪುರ ದವರೆಗೂ ದಕ್ಷಿಣಕ್ಕೆ ಸೀತಾನದಿ ಹೊಳೆ ಗಡಿಭಾಗ ಹೆಬ್ರಿ-ಚಾರ ದ ವರೆಗೂ ಉತ್ತರಕ್ಕೆ ಶಿರೂರು ಗಡಿಯ ಭಟ್ಕಳದವರೆಗೂ ಹಬ್ಬಿಕೊಂಡಿದೆ.

ಈ ಕುಂದ ಗನ್ನಡ ಭಾಷೆಯ ಜನರ ಆಚಾರ-ವಿಚಾರ ಪ್ರತ್ಯಾಕ ವಾಗಿದ್ದು, ಇಲ್ಲಿಯ ಜನರ ಹಲವು ವರುಷಗಳ ಬೇಡಿಕೆ ಕುಂದ ಗನ್ನಡಕ್ಕೆ ಪ್ರತ್ಯಕ ಜಿಲ್ಲೆಯಾಗಬೇಕೆಂಬ ಕನಸು.

*ಅಂದು ಕೈ ತಪ್ಪಿದ ಕುಂದಾಪುರ ಜಿಲ್ಲೆ*
ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲರು 1997 ರಲ್ಲಿ ನೂತನ 7 ಜಿಲ್ಲೆಗಳನ್ನು ಘೋಷಿಸುವ ಮುನ್ನ ಎಲ್ಲಿ ಕಂದಾಯ ಉಪ (ಸಹಾಯಕ ಕಮಿಷನರ್ ಕಚೇರಿ) ವಿಭಾಗ ಇದೆಯೋ ಅಲ್ಲೇ ನೂತನ ಜಿಲ್ಲಾ ಕೇಂದ್ರ ಮಾಡುದಾಗಿ ಘೋಷಿಸಿದರು.

ಆದರೆ ಎಲ್ಲಾ ಮೂಲ ಭೂತ ಸೌಕರ್ಯ ಗಳೂ,ಪ್ರವಾಸಿ ತಾಣಗಳೂ,ಜಿಲ್ಲಾ ಮಟ್ಟದ (ಎ. ಸಿ.ಕಚೇರಿ ಸಹಿತ) ಎಲ್ಲಾ ಸರಕಾರಿ ಕಚೇರಿಗಳು ಕುಂದಾಪುರದಲ್ಲಿ ಇದ್ದು ಕುಂದಾಪುರ ಜಿಲ್ಲೆ ಕೈ ತಪ್ಪಿ ಗದಗ,ಹಾವೇರಿ,ಭಾಗಲ ಕೋಟೆ,ಕೊ ಪ್ಪಳ,ದಾವಣಗೆರೆ,ಜೊತೆಗೆ ಉಡುಪಿ ಜಿಲ್ಲಾ ಕೇಂದ್ರವಾಯಿತು. ಇಂದೂ ಸಹ ಇದೆ ಸಹಾಯಕ ಕಮಿಷನರ್ ಕಚೇರಿ ಉಡುಪಿ ಜಿಲ್ಲಾ ಏಳು ತಾಲೂಕುಗಳ ವ್ಯಾಪ್ತಿಯನ್ನು ಹೊಂದಿದೆ.

ಜಿಲ್ಲಾ ಕೇಂದ್ರವಾದ ಉಡುಪಿ-ಮಣಿಪಾಲಕ್ಕೆ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಹೊಸಂಗಡಿ,ಯಾಡಮೊಗೆ,ಜಡ್ಕಲ್,ಕೊಲ್ಲೂರು,ಶಿರೂರು ಭಾಗದ ಜನರು ತಮ್ಮ ಕೆಲಸ ಕಾರ್ಯ ಗಳಿಗೆ 100ಕಿಮೀ ಹೆಚ್ಚು ದೂರ ಕ್ರಮಿಸಿ ಸರಕಾರಿ ಕೆಲಸವನ್ನು ಮಾಡಿ ಕೊಂಡು ಬರ ಬೇಕು.ಒಂದು ದಿನದಲ್ಲಿ ಆಗದೆ ಇದ್ದರೆ ಇನ್ನೊಂದು ದಿನ ಮೀಸಲಿಡ ಬೇಕು.

*ರಾಜಕೀಯ ಪಕ್ಷಗಳ ಅವಗಡನೆ: ಪ್ರತ್ಯೇಕ ಜಿಲ್ಲೆಗೆ ಚಿಂತನೆ*
ಇದುವರೆಗೂ ಯಾವುದೇ ರಾಜಕೀಯ ಪಕ್ಷದವರು ಅವಿಭಜಿತ (ಕುಂದಾಪುರ& ಬೈಂದೂರ)ಕುಂದಾಪುರ ತಾಲೂಕಿನಿಂದ ಗೆದ್ದವರನ್ನು ನಿರ್ಲಕ್ಷಿಸಿ ಸಚಿವ ಸ್ಥಾನ ನೀಡದೆ ಕುಂದಾಪುರ ತಾಲೂಕನ್ನು ಹಿಂದುಳಿಯಲು ಕಾರಣವಾಗಿದ್ದು, ಇಲ್ಲಿನ ಜನರ ಭಾವನೆಗೆ ದಕ್ಕೆಯಾಗಿದೆ.

ಇದಕ್ಕೆ ಸಡ್ಡು ಹೊಡೆಯಲು ಕುಂದಾಪುರ ಜಿಲ್ಲಾ ಬೇಡಿಕೆ ಹುಟ್ಟಿಕೊಂಡಿದೆ.
*ಬೇಕಾದ ತಾಲ್ಲೂಕುಗಳು*
ವಿಸ್ತೀರ್ಣದಲ್ಲಿ ಅತಿ ದೊಡ್ಡದಾದ ಕುಂದಾಪುರ ತಾಲೂಕಿನಿಂದ ಬೈಂದೂರು ಪ್ರತ್ಯೇಕ ತಾಲೂಕಾಗಿದೆ, ಜೊತೆಗೆ ಶಂಕರನಾರಾಯಣ ತಾಲೂಕು ರಚನೆ ಕೂಗಿಗೆ ಪ್ರಸ್ತಾವನೆ ದೊರಕಿದೆ, ಕೇವಲ 50 ಕಿಮೀ.ದೂರವಿರುವ ಭಟ್ಕಳ ತಾಲೂಕನ್ನು 178ಕಿಮೀ ದೂರವಿರುವ ಕಾರವಾರ ಜಿಲ್ಲಾ ಕೇಂದ್ರದಿಂದ ಬೇರ್ಪಡಿಸಿ ಭಟ್ಕಳ ಜನರ ಇಚ್ಛೆಯಂತೆ ಕುಂದಾಪುರ ಜಿಲ್ಲಾ ಕೇಂದ್ರದ ಜೊತೆಗೆ ವಿಲಿನ ಮಾಡಬೇಕು.

*ಎಂಟರ ಜೊತೆಗೆ ನಮ್ಮನ್ನು ಸೇರಿಸಿಕೊಳ್ಳಿ*
ವಿಜಯನಗರ, ಮಧುಗಿರಿ, ಚಿಕ್ಕೋಡಿ, ಶಿರಸಿ, ಶಿಕಾರಿಪುರ, ಹುನುಸೂರು, ಜಮಖಂಡಿ, ಪುತ್ತೂರು ಜಿಲ್ಲೆಗಳ ಬೇಡಿಕೆ ಆಯಾಯ ಭಾಗದ ಜನರಿಂದ ಸರಕಾರಕ್ಕೆ ಹೋಗಿದೆ.

ಈ ನೂತನ 8 ಜಿಲ್ಲೆಗಳ ಘೋಷಣೆ ಯೊಂದಿಗೆ 9ನೇ ಜಿಲ್ಲೆಯಾಗಿ ಕುಂದಾಪುರವನ್ನು ಸೇರಿಸಿ ಕೊಳ್ಳಿ ಎಂದು ಹೋರಾಟ ಸಮಿತಿ ಸರಕಾರಕ್ಕೆ ಮನವಿ ಸಲ್ಲಿಸಿದೆ.

*ಯಾರು ಯಾರಿಗೆ ಪತ್ರ.

ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ, ಕಂದಾಯ ಸಚಿವ ಆರ್. ಅಶೋಕ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವ ರಾಜ್ ಬೊಮ್ಮಾಯಿ,ಉಡುಪಿ ಜಿಲ್ಲಾ ಐದು ಮಂದಿ ಶಾಸಕರು, ಇಬ್ಬರು ಸಂಸದರು, ಭಟ್ಕಳ್ ಶಾಸಕ ಸುನಿಲ್ ನಾಯ್ಕ್,

ಉಡುಪಿ ಹಾಗೂ ಕಾರವಾರ ಜಿಲ್ಲಾಧಿಕಾರಿಗಳು, ಮೇಲ್ಮನೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ,ಹಾಗೂ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಇವರಿಗೆ ಮನವಿ ಪತ್ರ ಬರೆಯಲಾಗಿದೆ.

ಎಂದು ಕುಂದಾಪುರ ಜಿಲ್ಲಾ ರಚನಾ ಹೋರಾಟ ಸಮಿತಿ ಅಧ್ಯಕ್ಷ ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ,ಸಂಚಾಲಕ ದಿನಕರ ಶೆಟ್ಟಿ, ವಿಶೇಷ ಸಲಹೆಗಾರ ಚಿಟ್ಟೆ ರಾಜಗೋಪಾಲ ಹೆಗ್ಡೆ,ಪ್ರಧಾನ ಕಾರ್ಯದರ್ಶಿ ಗಣಪತಿ ಶ್ರೀಯನ್,ಉಪಾಧ್ಯಕ್ಷ ರುಗಳಾದ ದಸ್ತಗಿರಿ ಸಾಹೇಬ್ ಕಂಡಳೂರು, ನಾಡ ಸತೀಶ್ ನಾಯಕ್,ಡಾ.ಅನಿಲ್ ಕುಮಾರ್ ಶೆಟ್ಟಿ,ಕಾಡುರು ನವೀನ್ ಶೆಟ್ಟಿ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply