ಕುದ್ರೋಳಿಯಲ್ಲಿ 2.35 ಕೋಟಿ ವೆಚ್ಚದಲ್ಲಿ ಶಾಲೆ ಅಭಿವೃದ್ಧಿಗೆ ಶಾಸಕ ಕಾಮತ್ ಗುದ್ದಲಿಪೂಜೆ

ಮಂಗಳೂರು: ಮಹಾನಗರ ಪಾಲಿಕೆಯ ಕುದ್ರೋಳಿ ವಾರ್ಡಿನ ಮೌಲನಾ ಆಜಾದ್ ಮಾದರಿ ಶಾಲೆಗೆ 2.35 ಕೋಟಿ ವೆಚ್ಚದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಗುದ್ದಲಿಪೂಜೆ ನೆರವೇರಿಸಿದರು. 

ಬಳಿಕ ಮಾತನಾಡಿ, ಅಭಿವೃದ್ಧಿ ಎಂದರೆ ಕೇವಲ ರಸ್ತೆ, ತೋಡುಗಳ ಅಭಿವೃದ್ಧಿ ಮಾತ್ರವಲ್ಲ ಬದಲಾಗಿ ಶಿಕ್ಷಣ ಪಡೆಯುವ ಶಾಲೆಗಳನ್ನು ಉನ್ನತೀಕರಿಸಿದಾಗ ಅಭಿವೃದ್ಧಿ ಎನ್ನುವುದಕ್ಕೆ ನಿಜವಾದ ಅರ್ಥ ದೊರಕುತ್ತದೆ ಎಂದರು.ಶಿಕ್ಷಣ ಸಂಸ್ಥೆಗಳು ಜವಬ್ದಾರಿಯುತ ಸತ್ಪ್ರಜೆಗಳನ್ನು ಸೃಷ್ಟಿಸುವ ಕಾರ್ಖಾನೆ ಇದ್ದಂತೆ. ಹಾಗಾಗಿ ಶಿಕ್ಷಣ ವ್ಯವಸ್ಥೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತಿದ್ದೇವೆ. ಶಾಲಾ ಕಾಲೇಜುಗಳ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, ಅಭಿವೃದ್ಧಿಯ ಚಿಂತನೆಯೊಂದಿಗೆ ಯಾವುದೇ ತೆರನಾದ ರಾಜಕೀಯ ಮಾಡದೆ ಶಾಸಕ ವೇದವ್ಯಾಸ್ ಕಾಮತ್ ಸರ್ವರನ್ನೂ ಜೊತೆಗೂಡಿಸಿ ಸಾಗುತ್ತಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ಎಲ್ಲಾ ವಾರ್ಡುಗಳಿಗೂ ಅನುದಾನಗಳ ಮಹಾಪೂರವನ್ನೇ ಹರಿಸಿದ್ದಾರೆ ಎಂದರು.

 ಮಂಗಳೂರು ಮಹಾನಗರ ಪಾಲಿಕೆಯ ಉಪಮಹಾಪೌರ ಸುಮಂಗಲ ರಾವ್, ಸ್ಥಾಯಿ ಸಮಿತಿಯ ಅದ್ಯಕ್ಷ ಸಂದೀಪ್ ಗರೋಡಿ, ಲೋಕೇಶ್ ಬೊಳ್ಳಾಜೆ, ಲೀಲಾವತಿ ಪ್ರಕಾಶ್, ಶೋಭಾ ರಾಜೇಶ್, ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಜಗದೀಶ್ ಶೆಟ್ಟಿ ಬೋಳೂರು, ಚಂದ್ರಾವತಿ ವಿಶ್ವನಾಥ್, ಸಂಧ್ಯಾ ಮೋಹನ್ ಆಚಾರ್, ಜಯಶ್ರೀ ಕುಡ್ವ, ಪೂರ್ಣಿಮಾ, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ, ಬಿಜೆಪಿ ಮುಖಂಡರಾದ ರಮೇಶ್ ಹೆಗ್ಡೆ, ಭವಾನಿ ಶಂಕರ್, ಅರ್ಶಾದ್ ಪೋಪಿ, ಪ್ರಕಾಶ್ ಸಾಲ್ಯಾನ್, ಮೋಹನ್ ಆಚಾರ್, ಗಿರೀಶ್ ಕರ್ಕೇರ, ಹನೀಫ್ ಕುದ್ರೋಳಿ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply