Janardhan Kodavoor/ Team KaravaliXpress
24.6 C
Udupi
Thursday, June 30, 2022
Sathyanatha Stores Brahmavara

ಹಿರಿಯ ವೈದಿಕ ವಿದ್ವಾನ್ ಕೋಣಂದೂರು ಗೋಪಾಲಕೃಷ್ಣ ಆಚಾರ್ಯ ನಿಧನ

ಕಾರ್ಕಳದ ಹಿರಿಯ ವೈದಿಕ ವಿದ್ವಾಂಸ ಕೋಣಂದೂರು ಗೋಪಾಲಕೃಷ್ಣ ಆಚಾರ್ಯರು ( 89 ) ಅಲ್ಪಕಾಲದ ಅನಾರೋಗ್ಯದಿಂದ ದಿನಾಂಕ 21/9/2020 ಸೋಮವಾರದಂದು ಸ್ವಗೃಹದಲ್ಲಿ ನಿಧನ ಹೊಂದಿದರು.

ವೇದ ಶಾಸ್ತ್ರ ಪಾರಂಗತರಾಗಿದ್ದ ಆಚಾರ್ಯರು ತೆಳ್ಳಾರಿನ ಶ್ರೀ ರಾಘವೇಂದ್ರ ಮಠದ ಪ್ರಧಾನ ಅರ್ಚಕ ವ್ಯವಸ್ಥಾಪಕರಾಗಿ ಅನೇಕ ವರ್ಷ ಕಾರ್ಯನಿರ್ವಹಿಸಿದ್ದರು. ಸಂಪ್ರದಾಯ ನಿಷ್ಠೆಯಿಂದ ಧಾರ್ಮಿಕ ವಿಧಿವಿಧಾನಗಳನ್ನು ನಡೆಸುವಲ್ಲಿ ಸಿದ್ಧಹಸ್ತರಾಗಿದ್ದರು.

ಉತ್ತಮ ವಾಗ್ಮಿಗಳೂ ಆಗಿದ್ದು ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಅಭಿಮಾನಕ್ಕೆ ಪಾತ್ರರಾಗಿದ್ದ ಆಚಾರ್ಯರು ಪತ್ನಿ, ಕಾರ್ಕಳದ ನ್ಯಾಯವಾದಿ, ಯಕ್ಷಗಾನ ಅರ್ಥಧಾರಿ  ಶ್ರೀರಮಣ ಆಚಾರ್ಯ ಸಹಿತ ಮೂವರು ಪುತ್ರರನ್ನು ಅಗಲಿದ್ದಾರೆ

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!