ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮಣಿಪಾಲದಲ್ಲಿ ನೀಡುವ ಕೋವಿಡ್ ಲಸಿಕೆಯ ಬಗ್ಗೆ ಮಾಹಿತಿ

Coronavirus COVID-19 single dose small vials and multi dose in scientist hands concept. Research for new novel corona virus immunization drug.

ಉಡುಪಿ: ಪ್ರಸ್ತುತ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಡಾ. ಟಿ ಎಮ್ ಎ ಪೈ ಆಸ್ಪತ್ರೆ, ಉಡುಪಿ ಮತ್ತು ಡಾ. ಟಿ ಎಮ್ ಎ ಪೈ ರೋಟರಿ ಆಸ್ಪತ್ರೆ,ಕಾರ್ಕಳದಲ್ಲಿ ಕೋವಿಡ್ ಲಸಿಕೆಯು ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಿರುತ್ತದೆ.ಮೊದಲ ಡೊಸ್ ಮತ್ತು ಮೊದಲ ಡೋಸ್ ಪಡೆದು 84 ದಿನ ಕಳೆದವರಿಗೆ ಎರಡನೇ ಡೋಸ್ ಕೋವಿಶೀಲ್ಡ್  ಲಸಿಕೆ ಲಭ್ಯವಿರುತ್ತದೆ .

ಸರಕಾರ ನಿಗದಿಪಡಿಸಿದ ದರದಲ್ಲಿ ಲಸಿಕೆ ನೀಡುತ್ತಿದ್ದು  ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕಾಗಿ ಆಸ್ಪತ್ರೆಗಳ ಪ್ರಕಟಣೆ ತಿಳಿಸಿದೆ.ಅವಶ್ಯವಿದ್ದವರು ಕೋವಿನ್ ಆಪ್ ನಲ್ಲಿ ನೋಂದಣಿ ಮಾಡಿ ಅಥವಾ ನೇರವಾಗಿ ಆಧಾರ್ ಕಾರ್ಡ್ ನೊಂದಿಗೆ  ಮರೇನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಗೆ ಬರಲು ತಿಳಿಸಲಾಗಿದೆ.ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ಕೌಂಟರ್ ನ ವ್ಯವಸ್ಥೆ ಮಾಡಲಾಗಿದೆ.

ಹೆಚ್ಚಿನ ಮಾಹಿತಿಗೆ ಈ ಕೆಳಗಿನ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

ಕಸ್ತೂರ್ಬಾ ಆಸ್ಪತೆ,  ಮಣಿಪಾಲ: 0820  2922761

ಡಾ. ಟಿ ಎಂ ಎ ಪೈ ಆಸ್ಪತೆ, ಉಡುಪಿ :08202942126

ಡಾ. ಟಿ ಎಂ ಎ ರೋಟರಿ ಪೈ ಆಸ್ಪತೆ, ಕಾರ್ಕಳ :08258230583

ಆಸ್ಪತ್ರೆಯೂ ಆನ್‌ಸೈಟ್ ವ್ಯಾಕ್ಸಿನೇಷನ್ ಅಂದರೆ ನಿಮ್ಮ ಸ್ಥಳಕ್ಕೆ ಬಂದು ಲಸಿಕಾ ಕಾರ್ಯಕ್ರಮ ಕೂಡ ಮಾಡುತ್ತಿದ್ದು,ಇದರ ಕುರಿತು  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7338625909 ಗೆ ಕರೆ ಮಾಡಬಹುದು.

 

 
 
 
 
 
 
 
 
 
 
 

Leave a Reply