Janardhan Kodavoor/ Team KaravaliXpress
24.6 C
Udupi
Thursday, July 7, 2022
Sathyanatha Stores Brahmavara

ಕೋವಿಡ್ 19 ಸಂದರ್ಭದಲ್ಲಿ ಉಚಿತ ವೈದ್ಯಕೀಯ ಆಟೋ ಸೇವೆಯನ್ನು ಮಾಡಿದ 37 ಜನರಿಗೆ ಆಹಾರ ಕಿಟ್ ವಿತರಣೆ

ಉಡುಪಿ: ಕೋವಿಡ್ 19 ಸಂಕಷ್ಟದ ಸಮಯದಲ್ಲಿ ಕರ್ನಾಟಕ ರಾಜ್ಯದಲ್ಲಿ ಪ್ರಪ್ರಥಮವಾಗಿ, ಉಡುಪಿ ಜಿಲ್ಲಾಡಳಿತದ ಸಹಯೋಗದೊಂದಿಗೆ, ಉಡುಪಿ ತಾಲೂಕಿನ ಯಶೋಧ ಆಟೋ ಚಾಲಕರ ಮತ್ತು ಮಾಲಕರ ಸಂಘ (ರಿ) ಇದರ 37 ಜನರ ಆಟೋ ಕಳೆದ ಮೂವತ್ತು ದಿನಗಳಿಂದ ವೈದ್ಯಕೀಯ ಮತ್ತು ತುರ್ತು ಸೇವೆ ಮಾಡಿದ್ದಾರೆ.

ಈ ಸೇವೆಯನ್ನು ಗುರುತಿಸಿ ಮಂತ್ರಾಲಯದ ರಾಯರ ಪ್ರಸಾದರೂಪವಾಗಿ 25 ಕೆಜಿ ಅಕ್ಕಿಯನ್ನು ಉಡುಪಿಯ ರಾಘವೇಂದ್ರ ಮಠದವರು ಕೊಟ್ಟಿದ್ದಾರೆ.ಯಶೋಧ ಆಟೋ ಚಾಲಕರ ಮತ್ತು ಮಾಲಕರ ಸಂಘದ ಜಿಲ್ಲಾಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ ಕೋವಿಡ್ ವಾರಿಯರ್ಸ್ ಆಗಿ ದುಡಿದ 37 ಜನ ಆಟೋ ಚಾಲಕರಿಗೆ ಯಶೋಧ ಆಟೋ ಚಾಲಕರ ಮತ್ತು ಮಾಲಕರ ಸಂಘದ ವತಿಯಿಂದ 10 ಕೆಜಿ ಅಕ್ಕಿಯನ್ನು ನೀಡಿದ್ದಾರೆ. ಉಡುಪಿಯ ಪರ್ಯಾಯ ಅದಮಾರು ಶ್ರೀಕೃಷ್ಣ ಮಠದ ವತಿಯಿಂದ ಪ್ರಸಾದರೂಪವಾಗಿ ನೀಡಿದ ಆಹಾರಧಾನ್ಯದ ಕಿಟ್ ಗಳನ್ನು 37 ಜನ ಆಟೋ ಚಾಲಕರಿಗೆ ಪರ್ಯಾಯ ಶ್ರೀಗಳು ಕೊಡ ಮಾಡಿದ್ದಾರೆ. 

ಸಂಘದ ಜಿಲ್ಲಾಧ್ಯಕ್ಷ ಶ್ರೀ ಕೆ. ಕೃಷ್ಣಮೂರ್ತಿ ಆಚಾರ್ಯ,ಜಿಲ್ಲಾ ಉಪಾಧ್ಯಕ್ಷ ಮಹೇಶ್ ಸುವರ್ಣ ಮಲ್ಪೆ, ಮಾಜಿ ನಗರಸಭೆ ಅಧ್ಯಕ್ಷ ಮತ್ತು ಜಿಲ್ಲಾ ಉಪಾಧ್ಯಕ್ಷ ಯುವರಾಜ್ ಪುತ್ತೂರು,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಂಜಿಬೆಟ್ಟು, ಹರೀಶ್ ಅಮೀನ್,ಜಿಲ್ಲಾ ಕೋಶಾಧಿಕಾರಿ ಶ್ರೀನಿವಾಸ ಕಪ್ಪೆಟ್ಟು, ತಾಲೂಕು ಅಧ್ಯಕ್ಷ ಉದಯ್ ಪಂದುಬೆಟ್ಟು ಮತ್ತು ಅಬೂಬಕ್ಕರ್,ಹರೀಶ್ ಕಾಂಚನ್, ಪ್ರವೀಣ್ ಆಚಾರಿ, ಸಂತೋಷ್ ಶೇರಿಗಾರ್, ರವಿ ಶೇರಿಗಾರ್, ಭಾಸ್ಕರ್ ಶೇರಿಗಾರ್, ದಿನೇಶ್ ಪೂಜಾರಿ, ಮತ್ತು ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!