ಕಿಶೋರ ಪ್ರತಿಭೋತ್ಸವ 2022

ಕರ್ನಾಟಕ ಕರಾವಳಿ ನೃತ್ಯಕಲಾಪರಿಷತ್ ನಡೆಸಿಕೊಂಡು ಬರುತ್ತಿರುವ ಸರಣಿಕಾರ್ಯಕ್ರಮದಲ್ಲಿ “ಕಿಶೋರಪ್ರತಿಭೋತ್ಸವ2022 ಉಡುಪಿ ಕಾರ್ಯಕ್ರಮವು ದಿನಾಂಕ 11-11-2022 ಶುಕ್ರವಾರ ಸಂಜೆ 3-30 ರಿಂದ ಉಡುಪಿಯ ಚಿತ್ತರಂಜನ್ ಸರ್ಕಲ್ ನ ಸಮೀಪವಿರುವ ಹೋಟೆಲ್ ಸ್ವದೇಶ್ ಹೆರಿಟೇಜ್ ನ ” ಸ್ವರ್ಗ” ಸಭಾಂಗಣದಲ್ಲಿ ನಡೆಯಲಿದೆ.ಕಾರ್ಯಕ್ರಮದ ಉದ್ಘಾಟನೆಯನ್ನು ಹೋಟೆಲ್ ಸ್ವದೇಶ್ ಹೆರಿಟೇಜ್ ನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಶ್ರೀ ಎಂ. ಶ್ರೀನಾಗೇಶ್ ಹೆಗ್ಡೆಯವರು ನೆರವೇರಿಸಲಿದ್ದಾರೆ,ಅಧ್ಯಕ್ಷತೆಯನ್ನು ಪರಿಷತ್ತಿನ ಉಪಾಧ್ಯಕ್ಷರಾದ,ವಿದ್ವಾನ್ ಚಂದ್ರಶೇಖರ ನಾವಡ ಸುರತ್ಕಲ್,ಮತ್ತು ಅತಿಥಿಗಳಾಗಿ ಹಿರಿಯ ಉದ್ಯಮಿ ಮತ್ತು ಕಲಾಪೋಷಕರಾದ ಶ್ರೀ ವಿಶ್ವನಾಥ್ ಶೆಣೈ ವಹಿಸಿಕೊಳ್ಳಲಿದ್ದಾರೆ.ಉಡುಪಿ,ಕುಂದಾಪುರ, ಕಾರ್ಕಳ, ಕಾಪು ಮುಂತಾದ ಕಡೆಗಳ ನೃತ್ಯಗುರುಗಳ ಸುಮಾರು ಹದಿನೈದು ಕಿಶೋರ ಪ್ರತಿಭೆಗಳು ನೃತ್ಯಪ್ರದರ್ಶನ ನೀಡಲಿದ್ದಾರೆ ಎಂದು ಪರಿಷತ್ತಿನ ಕಾರ್ಯದರ್ಶಿಗಳಾಗಿರುವ ವಿದ್ವಾನ್ ಸುಧೀರ್ ರಾವ್ ಕೊಡವೂರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply