ಕೋಟ- ಇ ಶ್ರಮ ನೊಂದಣಿ ಕಾರ್ಯಕ್ರಮ

ಕೋಟ: ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಕೋಟ ಮತ್ತು ಸಾಲಿಗ್ರಾಮ ವಲಯದ ನೇತ್ರತ್ವದಲ್ಲಿ ಎಜುಕೇರ್ ಡಿಜಿಟಲ್ ಸೇವಾ ಕೇಂದ್ರ ಕೋಟ ,ಅಮೃತೇಶ್ವರಿ ಡಿಜಿಟಲ್ ಸೇವಾಕೇಂದ್ರ ಕೋಟ ,ಕೋಟತಟ್ಟು ಗ್ರಾಮಪಂಚಾಯತ್ ಮತ್ತು ಕಾರಂತ ಪ್ರತಿಷ್ಠಾನ ಇವರುಗಳ ಸಗಯೋಗದೊಂದಿಗೆ ಇ ಶ್ರಮ ನೊಂದಣಿ ಕಾರ್ಯಕ್ರಮ ಭಾನುವಾರ ಕೋಟದ ಕಾರಂತ ಥೀಂ ಪಾಕ್೯ ನಲ್ಲಿ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟೈಲರ್ ಅಸೋಸಿಯೇಷನ್ ಕೋಟ ಸಾಲಿಗ್ರಾಮ ವಲಯ ಅಧ್ಯಕ್ಷ ಗಣೇಶ್ ಪೂಜಾರಿ ವಹಿಸಿದ್ದರು.

ಉಡುಪಿ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಕುಮಾರ್ .ಬಿ.ಆರ್ ಇಶ್ರಮ ಕಾಡ್೯ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಜುಕೇರ್ ಡಿಜಿಟಲ್ ಸೇವಾ ಕೇಂದ್ರದ ವ್ಯವಸ್ಥಾಪಕ ಚೇತನ್ ಮತ್ತು ಅಮೃತೇಶ್ವರಿ ಡಿಜಿಟಲ್ ಸೇವಾ ಕೇಂದ್ರದ ಶ್ರೀಕಾಂತ್, ರಾಘವೇಂದ್ರ ದೇವಾಡಿಗ,ಉಡುಪಿ ಜಿಲ್ಲಾ ಸಿಎಸ್ ಕೇಂದ್ರ ಜಿಲ್ಲಾ ವ್ಯವಸ್ಥಾಪಕ ಗೋವರ್ಧನ್ ಉಪಸ್ಥಿತರಿದ್ದರು.

ಕೋಟ ಸಾಲಿಗ್ರಾಮ ವಲಯದ ಟೈಲರ್ ಅಸೋಸಿಯೇಷನ್ ಕೃಷ್ಣ ದೇವಾಡಿಗ ಸ್ವಾಗತಿಸಿ ನಿರೂಪಿಸಿದರು ವಲಯದ ಕಾರ್ಯದರ್ಶಿ ಅವಿನಾಶ್ ಮರಕಾಲ ವಂದಿಸಿದರು.

ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಕೋಟ ಮತ್ತು ಸಾಲಿಗ್ರಾಮ ವಲಯದ ನೇತ್ರತ್ವದಲ್ಲಿ ಇ ಶ್ರಮ ನೊಂದಣಿ ಕಾರ್ಯಕ್ರಮ ಭಾನುವಾರ ಕೋಟದ ಕಾರಂತ ಥೀಂ ಪಾಕ್೯ನಲ್ಲಿ ಜರಗಿತು. ಉಡುಪಿ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಕುಮಾರ್ .ಬಿ.ಆರ್, ಟೈಲರ್ ಅಸೋಸಿಯೇಷನ್ ಕೋಟ ಸಾಲಿಗ್ರಾಮ ವಲಯ ಅಧ್ಯಕ್ಷ ಗಣೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply