Janardhan Kodavoor/ Team KaravaliXpress
30.6 C
Udupi
Wednesday, August 17, 2022
Sathyanatha Stores Brahmavara

ಮೊಹಲ್ಲಾಗಳಲ್ಲಿ ಯಾವುದೇ ಸಮಸ್ಯೆಗಳು ಬಂದರೆ ಸೌಹಾರ್ದಯುತವಾಗಿ ಪರಿಹರಿಸಿ~ನೂತನ ಖಾಝಿ ಮಾಣಿ ಉಸ್ತಾದ್

ಉಡುಪಿ: ಜಿಲ್ಲಾ ಸುನ್ನಿ ಸಂಯುಕ್ತ ಜಮಾಅತ್ ನ ನೂತನ ಖಾಝಿಯಾಗಿ ಅಧಿಕಾರ ಸ್ವೀಕಾರ ಸಮಾರಂಭ ಹಾಗೂ ಬೇಕಲ್ ಉಸ್ತಾದರ ಅನುಸ್ಮರಣಾ ಮಜ್ಞಿಸ್ ಕೇಂದ್ರ ಮಸೀದಿ ಮೂಳೂರಿನಲ್ಲಿ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಪಿ ಅಬೂಬಕ್ಕರ್ ನೇಜಾರ್ ರವರ ಅಧ್ಯಕ್ಷತೆಯಲ್ಲಿ ಜರಗಿತು ಅಸ್ಸಯ್ಯಿದ್ ಮುಖ್ತಾರ್ ತಂಙಳ್ ಕುಂಬೋಳ್ ಅನುಸ್ಮರಣಾ ಮಜ್ಲಿಸ್ ನೇತೃತ್ವ ವಹಿಸಿದ್ದರು ಖಾಝಿ ಸ್ವೀಕಾರ ಸಮಾರಂಭವನ್ನು ಇಸ್ಲಾಮಿಕ್ ಎಜುಕೇಶನ್ ಬೋರ್ಡ್ ಆಫ್ ಇಂಡಿಯಾ ಇದರ ಅಧ್ಯಾಪಕ ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ ಮುಹಮ್ಮದ್ ಫಾಝಿಲ್ ರಿಝಿ ಕಾವಳಕಟ್ಟೆ ಉದ್ಘಾಟಿಸಿದರು. ಖಾಝಿ ಪದಗ್ರಹಣ ನೇತೃತ್ವವನ್ನು ಕರ್ನಾಟಕ ಉಲಮಾ ಒಕ್ಕೂಟದ ಕೋಶಾಧಿಕಾರಿ ಕೂಡಗು ಜಿಲ್ಲಾ ಸಹಾಯಕ ಖಾಝಿ ಎಡಪ್ಪಾಲ ಮಹ್ಮೂದ್ ಮುಸ್ಲಿಯಾರ್ ನಿರ್ವಹಿಸಿದರು.

ಖಾಝಿಯಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಝೈನುಲ್ ಉಲಮಾ ಮಾಣಿ ಉಸ್ತಾದ್ ಜಮಾ ಅತ್‌ಗಳಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಬೇಕು, ಯಾವುದೇ ಸಮಸ್ಯೆಗಳು ಬಂದರೂ ಅದನ್ನು ಬಗೆಹರಿಸಲು ಇಸ್ಲಾಮಿನಲ್ಲಿ ತುಂಬಾ ಮಾರ್ಗಗಳಿವೆ ಎಲ್ಲಾ ಸಮಸ್ಯೆಗಳಿಗೆ ಅಂತಿಮ ನಿರ್ಧಾರ ಖಾಝಿಯವರ ದ್ದಾಗಿದೆ ಎಂದು ಹೇಳಿದರು. ಕೆಡುಕಿನತ್ತ ಹೋಗುವ ಯುವ ಸಮುದಾಯವನ್ನು ಒಳಿತಿನ ಕಡೆಗೆ ತರವು ಲ್ಲಿಯೂ ಜಮಾಅತ್ ಸಮಿತಿಗಳು ಹಾಗೂ ಧರ್ಮಗುರುಗಳು ಶ್ರಮಿಸಬೇಕು ಎಂದು ಖಾಝಿಮಾಣಿ ಉಸ್ತಾದ್ ಹೇಳಿದರು.ಉಲಮಾ ಒಕ್ಕೂಟದ ಉಪಾಧ್ಯಕ್ಷ ಕೆ ಪಿ ಹುಸೈನ್ ಸಅದಿ ಕೆ.ಸಿ ರೋಡ್ ಮುಖ್ಯ ಭಾಷಣ ಮಾಡಿದರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸುನ್ನೀ ಕೋರ್ಡಿನೇಶನ್ ಅಧ್ಯಕ್ಷ ಎಸ್.ಪಿ ಹಂಝ ಸಖಾಫಿ ಬಂಟ್ವಾಳ. ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಅಬೂ ಸುಫ್ಯಾನ್ ಇಬ್ರಾಹಿಂ ಮದನಿ, ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್, ಯೂಸುಫ್ ಸಖಾಫಿ ಕೋಡಿ, ಇಸ್ಮಾಯಿಲ್ ಮದನಿ ಮಾವಿನಕಟ್ಟೆ, ಅಲ್ಹಾಜ್ ಸಲೀಂ ಮದನಿ ಎಲ್ಲೂರು, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಹಾಜಿ ಕೆ ಪಿ ಇಬ್ರಾಹಿಂ ಮಟಪಾಡಿ, ಎಸ್ ಇ ಡಿಸಿ ರಾಜ್ಯಾಧ್ಯಕ್ಷಕೆ. ಕೆ. ಎಂ ಮುಹ್ಯದ್ಧೀನ್ ಕಾಮಿಲ್ ಸಖಾಫಿ, ಮೂಳೂರು ಕೇಂದ್ರ ಮಸೀದಿ ಖತೀಬ್ ಅಬ್ದುರ್ರಹ್ಮಾನ್ ಮದನಿ, ಸುನ್ನೀ ಸೆಂಟರ್ ಮ್ಯಾನೇಜರ್ ಯು ಕೆ ಮುಸ್ತಫ ಸಅದಿ,

ಜಿಲ್ಲಾ ಉಲಮಾ ಒಕ್ಕೂಟದ ಅಧ್ಯಕ್ಷ ಅಶ್ರಫ್ ಸಖಾಫಿ ಕನ್ನಂಗಾರ್, ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಅಶ್ರಫ್ ಅಂಜದಿ ಪಕ್ಷಿಕೆರೆ, ಎಸ್ ವೈ ಎಸ್ ರಾಜ್ಯ ಕಾರ್ಯದರ್ಶಿ ಅಶ್ರಫ್ ಕಿನಾರ, ಮೂಳೂರು ಕೇಂದ್ರ ಮಸೀದಿ ಅಧ್ಯಕ್ಷ ಎಮ್ ಹೆಚ್ ಬಿ ಮುಹಮ್ಮದ್ ಮುಳೂರು, ಕೆ ಸಿ ಎಫ್ ಐ ಎನ್ ಸಿ ಅಧ್ಯಕ್ಷ ಹಾಜಿ ಶ್ಶಖ್ ಬಾವ ಡಿಕೆಎಸ್ ಸಿ ನಾಯಕ ಹಾಜಿ ಇಸ್ಮಾಯಿಲ್ ಕಿನ್ಯ ಎಸ್ ಡಿ ಐ ಮುಬಲ್ಲಿಗ್ ಮೌಲಾನಾ ಸಾದಿಕ್ ರಝಿ ಉಪ್ಪಳ, ಹಾಜಿ ತೌಫಿಕ್ ಅಬ್ದುಲ್ಲಾ ನಾವುಂದ, ಹಾಜಿ ಚೆರಿಯಬ್ಬ ಮಾವಿನಕಟ್ಟೆ, ಎಸ್ ಡಿ ಐ ಜಿಲ್ಲಾಧ್ಯಕ್ಷ ಸಯ್ಯಿದ್ ಫರೀದ್ ಉಡುಪಿ, ಅಡ್ವಕೆಟ್ ಹಂಝತ್ ಹೆಜಮಾಡಿ, ಎಸ್ ಎಮ್ ಎ ಜಿಲ್ಲಾಧ್ಯಕ್ಷ ಮನ್ಸೂರ್ ಕೋಡಿ, ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಶಬೀರ್ ಸಖಾಫಿ, ಹಾಗೂ ಜಂಇಯ್ಯತುಲ್ ಉಲಮಾ ಮುಶಾವರ ಸದಸ್ಯರೂ ರಾಜ್ಯದ ವಿವಿಧ ಸುನ್ನೀ ಸಂಘಟನೆಗಳ ಪ್ರಮುಖರೂ ಹಾಗೂ ಮತ್ತಿತರ ನಾಯಕರು ಭಾಗವಹಿಸಿದ್ದರು.

ಕೇಂದ್ರ ಮಸೀದಿ ಮೂಳೂರು ಕಾರ್ಯದರ್ಶಿ ವೈ ಬಿ ಸಿ ಬಶೀರ್ ಅಲಿ ಸ್ವಾಗತಿಸಿದರು. ಸಂಯುಕ್ತ ಜಮಾಅತ್ ಸಂಘಟನಾ ಕಾರ್ಯದರ್ಶಿ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ನಿರೂಪಿಸಿದರು. ಕಾರ್ಯದರ್ಶಿ ಹಾಜಿ ಎಮ್ ಎ ಬಾವು ಮೂಳೂರು ವಂದಿಸಿದರು

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!