Janardhan Kodavoor/ Team KaravaliXpress
26 C
Udupi
Monday, May 17, 2021

ಉಡುಪಿಯಲ್ಲಿ ಪಾಳುಬಿದ್ದಿರುವ 2,000 ಎಕರೆಗೂ ಹೆಚ್ಚು ಭೂಮಿಯಲ್ಲಿ ಭತ್ತದ ಕೃಷಿಗೆ ಸಿದ್ಧತೆ

ಉಡುಪಿ: ಹಡಿಲುಬಿದ್ದ ಭೂಮಿ ಕೃಷಿಗಾಗಿ ಬಳಕೆಯಾಗಬೇಕು ಎಂಬ ಉದ್ದೇಶದಿಂದ ಕೇದಾರೋತ್ಥಾನ ಟ್ರಸ್ಟ್‌ ಮುಂದಡಿ ಇಟ್ಟಿದೆ. ಉಡುಪಿ ತಾಲ್ಲೂಕಿನಲ್ಲಿ ಬೀಳುಬಿದ್ದಿರುವ 2,000 ಎಕರೆಗೂ ಹೆಚ್ಚು ಭೂಮಿಯಲ್ಲಿ ಭತ್ತದ ಕೃಷಿಗೆ ಸಿದ್ಧತೆ ನಡೆಸಿದೆ.

ಶಾಸಕ ಕೆ.ರಘುಪತಿ ಭಟ್ ನೇತೃತ್ವದಲ್ಲಿ ರಚನೆಯಾಗಿರುವ ಕೇದಾರೋತ್ಥಾನ ಟ್ರಸ್ಟ್ ತಾಲ್ಲೂಕಿನ 19 ಗ್ರಾಮ ಪಂಚಾಯಿತಿಗಳಲ್ಲಿ ಪ್ರಮುಖರ ಸಭೆ ನಡೆಸಿದ್ದು, ಪಂಚಾಯಿತಿವಾರು ಹಡಿಲು ಭೂಮಿ ಗುರುತಿಸಿದೆ. ಭೂಮಾಲೀಕರ ಒಪ್ಪಿಗೆ ಪಡೆದು ಉಳುಮೆಯನ್ನೂ ಆರಂಭಿಸಿದೆ.ಅಂತರ್ಜಲ ವೃದ್ಧಿ, ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ, ಲಾಕ್‌ಡೌನ್‌ನಿಂದ ನಗರಬಿಟ್ಟು ಊರು ಸೇರಿರುವ ಯುವಕರನ್ನು ಕೃಷಿಯತ್ತ ಸೆಳೆಯುವುದು ಈ ಟ್ರಸ್ಟ್‌ನ ಉದ್ದೇಶ.

ದಶಕಗಳಿಂದ ಕೃಷಿ ಮಾಡದೆ ಜೊಂಡು ಬೆಳೆದಿರುವ ಭೂಮಿಯನ್ನು 15ಕ್ಕೂ ಹೆಚ್ಚು ಜೆಸಿಬಿಗಳಿಂದ ಹಸನು ಮಾಡಲಾಗುತ್ತಿದೆ.ಮುಚ್ಚಿಹೋಗಿದ್ದ ಕಾಲುವೆಗಳನ್ನು ಬಿಡಿಸಲಾಗುತ್ತಿದೆ.

2,000 ಎಕರೆಯಲ್ಲಿ ಭತ್ತ ಬೆಳೆಯಲು ₹ 4 ರಿಂದ₹ 5 ಕೋಟಿ ಖರ್ಚು ಅಂದಾಜಿಸಲಾಗಿದ್ದು, ಈ ಹಣವನ್ನು ದಾನಿಗಳಿಂದ ಪಡೆಯಲು ಹಾಗೂ ಬಡ್ಡಿ ರಹಿತ ಮುಂಗಡವಾಗಿ ಪಡೆಯಲು ಟ್ರಸ್ಟ್‌ ನಿರ್ಧರಿಸಿದೆ.

ಕರಾವಳಿಯಲ್ಲಿ ಬಹುಬೇಡಿಕೆಯ ಎಂಒ-4 (ಕಜೆ) ತಳಿಯ ಭತ್ತವನ್ನು ಸಾವಯವ ಪದ್ಧತಿಯಲ್ಲಿ ಬೆಳೆಯಲಾಗುತ್ತಿದ್ದು, ಬೆಳೆದ ಭತ್ತವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಖರ್ಚುವೆಚ್ಚ ಸರಿದೂಗಿಸಲಾಗುವುದು. ಮುಂಗಡ ಕೊಟ್ಟವರಿಗೆ ಮರುಪಾವತಿ ಮಾಡಲಾಗುವುದು ಎಂದು ಟ್ರಸ್ಟ್‌ನ ಅಧ್ಯಕ್ಷ ಹಾಗೂ ಶಾಸಕ ಕೆ.ರಘುಪತಿ ಭಟ್ ತಿಳಿಸಿದರು.

ಕನಿಷ್ಠ 2,000 ಎಕರೆ ಹಡಿಲು ಭೂಮಿಯನ್ನು ಕೃಷಿ ಮಾಡುವುದು ಟ್ರಸ್ಟ್‌ನ ಗುರಿ. ಇಲ್ಲಿ ಭೂಮಾಲೀಕರ ಹಾಗೂ ಟ್ರಸ್ಟ್‌ ಮಧ್ಯೆ ಒಪ್ಪಂದ ಇರುವುದಿಲ್ಲ. ಭೂಮಿ ಕೊಟ್ಟವರಿಗೆ ಗೇಣಿಯನ್ನು ನೀಡುವುದಿಲ್ಲ. ಬದಲಾಗಿ, ಭೂಮಿಯನ್ನು ಕೃಷಿ ಮಾಡಲು ಹಸನು ಮಾಡಿಕೊಡಲಾಗುತ್ತದೆ ಎಂದು ಶಾಸಕರು ತಿಳಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ತೌಕ್ತೆ ಚಂಡಮಾರುತದ ಪರಿಣಾಮ ಕಾಪು  ಪರಿಸರದಲ್ಲಿ ಹಾನಿಗೊಳಗಾದ ಪ್ರದೇಶಕ್ಕೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಭೇಟಿ 

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರು ಶನಿವಾರದಂದು ತೌಕ್ತೆ ಚಂಡಮಾರುತದ ಪರಿಣಾಮ ಕಾಪು  ಪರಿಸರದಲ್ಲಿ ಹಾನಿಗೊಳಗಾದ ಪರಿಸರಕ್ಕೆ ಭೇಟಿ ನೀಡಿ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.  ಹಾನಿಗೊಳಗಾದ ಪ್ರದೇಶದ ಕುರಿತು...

ಸೋದೆ, ಶಿರೂರು ಉಭಯ ಶ್ರೀಗಳಿಂದ ಪಲಿಮಾರು ಮೂಲ ಮಠಕ್ಕೆ ಭೇಟಿ 

ಶೀರೂರು ಮಠಕ್ಕೆ ಪಟ್ಟಾಭಿಷಿಕ್ತರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಸೋದೆ ಶ್ರೀವಿಶ್ವ ವಲ್ಲಭ ತೀರ್ಥರ ಜೊತೆಯಾಗಿ ಪಲಿಮಾರು ಮೂಲಮಠಕ್ಕೆ ಭೇಟಿ ನೀಡಿ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರಿಗೆ ಹಾಗೂ ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರಿಗೆ...

ಪೆರಂಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯುತ್ತಿದೆ ಪ್ರಗತಿಕಾರ್ಯ

ಉಡುಪಿ: ಜಿಲ್ಲೆಯ ಶಿವಳ್ಳಿ ಗ್ರಾಮದ ಪೆರಂಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಕೆಲವು ನವೀಕರಣ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದು ಮೊದಲ ಹಂತದಲ್ಲಿ ಶ್ರೀ ಮಹಾಗಣಪತಿಯ ಗುಡಿ ತೀರ್ಥಮಂಟಪಗಳನ್ನು ನೂತನವಾಗಿ ನಿರ್ಮಿಸಲಾಗುತ್ತಿದೆ .‌ ಸೀಮಿತ ಅವಧಿಯೊಳಗೆ ಕಾರ್ಯಗಳನ್ನು...

​ಕಾಪು ಸಮುದ್ರ ಮಧ್ಯೆ ಸಿಲುಕಿಕೊಂಡಿರುವ 9 ಕಾರ್ಮಿಕರ ರಕ್ಷಣೆಗೆ ಪ್ರಧಾನಿ, ರಕ್ಷಣಾ ಸಚಿವರಿಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮನವಿ

ಭಾರತ ಸರಕಾರದ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಮತ್ತು ಗೌರವಾನ್ವಿತ ಪ್ರಧಾನಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರೇ, ಉಡುಪಿ ಜಿಲ್ಲೆಯ ಕಾಪು ಸಮುದ್ರ ತೀರದಿಂದ ಸಮುದ್ರದ ಮಧ್ಯದಲ್ಲಿ ಈ ಬಡಪಾಯಿ ಕಾರ್ಮಿಕರು ಸಿಕ್ಕಿಬಿದ್ದಿರುತ್ತಾರೆ, ಸಮುದ್ರ...
error: Content is protected !!