ಕೊಡವೂರು ಬ್ರಾಹ್ಮಣ ಮಹಾಸಭಾದ ವತಿಯಿಂದ “ವಿಶ್ವ ಹೃದಯ ದಿನಾಚರಣೆ”

ಮಲ್ಪೆ: ಬ್ರಾಹ್ಮಣ ಮಹಾಸಭಾ ಕೊಡವೂರು ತನ್ನ ರಜತೋತ್ಸವದ ಅಂಗವಾಗಿ ಹಮ್ಮಿಕೊಂಡ ಸರಣಿ ಕಾರ್ಯಕ್ರಮಗಳಲ್ಲಿ 19ನೇ ಕಾರ್ಯಕ್ರಮವಾಗಿ “ವಿಶ್ವ ಹೃದಯ ದಿನಾಚರಣೆಯನ್ನು” ಈ ಬಾರಿಯ ದ್ಯೇಯ ವಾಕ್ಯ “ಡಿಜಿಟಲ್ ಹೆಲ್ತ್ ” ಗೆ ಅನುಗುಣವಾಗಿ ವಾಟ್ಸಾಪ್ ಹಾಗೂ ಫೇಸ್‌ಬುಕ್‌ ಮೂಲಕ ಹೃದಯದ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಸೆ.29ರಂದು ಹಮ್ಮಿಕೊಳ್ಳಲಾಗಿತ್ತು.

 ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿಯ ಪ್ರಖ್ಯಾತ ವೈದ್ಯ – ಡಾ. ಜಯಪ್ರಕಾಶ್ ಬೆಳ್ಳೆಯವರು ಆಗಮಿಸಿ  ಮನುಷ್ಯನ ಅಂಗಾಂಗಗಳಲ್ಲಿ ಹೃದಯಕ್ಕೆ ಇರುವ ಪ್ರಾಮುಖ್ಯತೆ, ನಮ್ಮ ದೇಹ ಸುಸ್ಥಿತಿಯಲ್ಲಿರಲು ಹೃದಯದ ನಿರಂತರ ಚಟುವಟಿಕೆ, ಹೃದಯದ ಆರೋಗ್ಯದ ಪ್ರಾಮುಖ್ಯತೆ ಹಾಗೂ ಹೃದಯದ ಚಿಕಿತ್ಸೆ, ಈ ಎಲ್ಲಾ ವಿಷಯಗಳ ಬಗ್ಗೆ ಅತ್ಯುತ್ತಮ ಮಾಹಿತಿ ನೀಡಿದರು.  ಇದೇ ಸಂದರ್ಭದಲ್ಲಿ, ರಜತೋತ್ಸವ ಸಮಿತಿಯ ಪರವಾಗಿ ಡಾ. ಬೆಳ್ಳೆಯವರನ್ನು ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ ಭಟ್ಟರು ಅಭಿನಂದಿಸಿದರು. 

ಸಮಿತಿಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ರಾವ್ ಸ್ವಾಗತಿಸಿ, ಕಾರ್ಯದರ್ಶಿ ಮುರಳೀಧರ್ ಕೊಡವೂರು ವಂದಿಸಿದರು. ಪ್ರಸನ್ನ ಕೊಡವೂರು ಮತ್ತು ಇನ್ನಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply