Janardhan Kodavoor/ Team KaravaliXpress
24.6 C
Udupi
Monday, November 28, 2022
Sathyanatha Stores Brahmavara

ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಹೆಬ್ರಿ ತಾಲ್ಲೂಕು ಘಟಕ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಹೆಬ್ರಿ ತಾಲ್ಲೂಕು ಘಟಕ ವತಿಯಿಂದ ನಾಟಿ ವೈದ್ಯರಾದ ಒಳಬೈಲು ಮಹಾಬಲ ನಾಯಕ್ ಅವರಿಗೆ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು.

ತಾಯಿ ಭುವನೇಶ್ವರಿ ದೇವಿಗೆ ಸೇರಿದ ಎಲ್ಲರೂ ಪುಷ್ಪಾರ್ಚನೆ ಮಾಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಘಟಕ, ಹೆಬ್ರಿಯ ಅಧ್ಯಕ್ಷರಾದ ಶ್ರೀನಿವಾಸ ಭಂಡಾರಿ ಅವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಸನ್ಮಾನ ಕಾರ್ಯ ನೆರವೇರಿಸಿದ ರವಿಶಂಕರ್ ರಾವ್ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಮಹಾಬಲ ನಾಯಕ್ ಅವರ ಸಾಮಾಜಿಕ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು.
ಹೆಬ್ರಿ ತಾಲ್ಲೂಕು ಪಂಚಾಯತಿಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ರಮೇಶ್ ಪೂಜಾರಿ ಅವರು ನಾಟಿ ವೈದ್ಯ ಪದ್ಧತಿಯನ್ನು ಮುಂದಿನ ಪೀಳಿಗೆಯವರು ಮುನ್ನಡೆಸಿಕೊಂಡು ಹೋಗುವಂತೆ ಆಗಬೇಕೆಂದು ಆಶಿಸಿದರು.

ಶಿವಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶೇಖರ್ ಶೆಟ್ಟಿ ಅವರು ಗಿಡ ಮೂಲಿಕೆ ಬೆಳೆಯಲು ಅನುಕೂಲ ಆಗುವಂತೆ ಸರಕಾರದ ವತಿಯಿಂದ ನೀರಿನ ವ್ಯವಸ್ಥೆ ಮಾಡಿಸಿಕೊಡುವ ಭರವಸೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ರಮಾನಂದ ಶೆಟ್ಟಿ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರಾದ ವೀಣಾ. ಆರ್. ಭಟ್, ಪುಷ್ಪಾವತಿ, ಶೈಲಜಾ ಶಿವಪುರ, ಮಹೇಶ್ ಹೈಕಾಡಿ, ಕಬ್ಬಿನಾಲೆ ಬಾಲಚಂದ್ರ ಹೆಬ್ಬಾರ್, ವಿದ್ಯಾ ಜನಾರ್ಧನ್, ಪ್ರೇಮ ಬೀರಾದಾರ್,ಹಿರಿಯರಾದ ಮ.ಮ.ಹೆಬ್ಬಾರ್ ಕುಚ್ಚೂರು ಉಪಸ್ಥಿತರಿದ್ದರು.

ಗೌರವ ಕಾರ್ಯದರ್ಶಿ ಡಾ. ಪ್ರವೀಣ ಕುಮಾರ್ ಎಸ್ ಅವರು ಸ್ವಾಗತ ಮಾಡಿದರು. ಮಂಜುನಾಥ್ ಕುಲಾಲ್ ನಿರೂಪಿಸಿದರು. ಶೋಭಾ.ಆರ್ .ಕಲ್ಕೂರ್ ಪ್ರಾರ್ಥಿಸಿದರು ಪ್ರೀತೇಶ್ ಶೆಟ್ಟಿ ವಂದಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!