ಕಾಪು ವೃತ್ತ ವ್ಯಾಪ್ತಿಯಲ್ಲಿ 92 ವಾಹನಗಳು ವಶಕ್ಕೆ

ಕಾಪು : ಕಾಪು ಇನ್ಸ್‍ಪೆಕ್ಟರ್ ಕಚೇರಿ ವ್ಯಾಪ್ತಿಯ ಪಡುಬದ್ರಿ, ಕಾಪು, ಶಿರ್ವ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ. ಅನಗತ್ಯ ಸಂಚಾರ ನಡೆಸುವ ವಾಹನಗಳ ವಿರುದ್ಧ ಪೊಲೀಸರು ಕ್ರಮಕೈಗೊಳ್ಳುತ್ತಿದ್ದಾರೆ.ಕೊರೋನಾ ಮಾರ್ಗಸೂಚಿ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿ ಎಪ್ರಿಲ್ 21ರಿಂದ ಮೇ 20ರವರೆಗೆ ಒಟ್ಟು 41 ಪ್ರಕರಣಗಳು ಹಾಗೂ ಅನಗತ್ಯ ವಾಹನ ಸಂಚಾರಕ್ಕೆ ಸಂಬಂಧಿಸಿ 92 ವಾಹನಗಳ ವಿರುದ್ಧ ಪ್ರಕರಣಗಳು ದಾಖಲಾಗಿದೆ.

ಕಾಪುವಿನ ವಿವಿಧೆಡೆಗಳಲ್ಲಿ ಮಾರ್ಗಸೂಚಿ ಉಲ್ಲಂಘನೆಗೆ ಸಂಬಂಧಿಸಿ ಕಾಪು ಇನ್ಸ್‍ಪೆಕ್ಟರ್ ಕಚೇರಿಯಿಂದ 10, ಕಾಪು ಠಾಣೆಯಲ್ಲಿ 12, ಶಿರ್ವ 8, ಪಡುಬಿದ್ರಿ 11 ಪ್ರಕರಣಗಳು ದಾಖಲಾಗಿವೆ. ಅನಗತ್ಯ ವಾಹನ ಸಂಚಾರಕ್ಕೆ ಸಂಬಂಧಿಸಿ ಕಾಪು ಇನ್ಸ್ ಪೆಕ್ಟರ್ ಕಚೇರಿಯಿಂದ 17 ವಾಹನಗಳು, ಕಾಪು ಠಾಣೆ ವ್ಯಾಪ್ತಿಯಲ್ಲಿ 37 ವಾಹನಗಳು, ಶಿರ್ವ ಠಾಣಾ ವ್ಯಾಪ್ತಿಯಲ್ಲಿ 23 ವಾಹನಗಳು, ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿ 15 ವಾಹನಗಳು ಸೇರಿ ಒಟ್ಟು 92 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇನ್ಸ್‍ಪೆಕ್ಟರ್ ಪ್ರಕಾಶ್ ತಿಳಿಸಿದ್ದಾರೆ.

 

  

 
 
 
 
 
 
 
 
 
 
 

Leave a Reply