Janardhan Kodavoor/ Team KaravaliXpress
32.6 C
Udupi
Sunday, February 5, 2023
Sathyanatha Stores Brahmavara

ಕಲ್ಮಾಡಿ ಜಂಕ್ಷನ್ ಬಳಿ​ ಸರಣಿ ಅಪಘಾತ

ಮಲ್ಪೆ : ಉಡುಪಿ ಜಿಲ್ಲೆಯ ಮಲ್ಪೆ ರಸ್ತೆಯ ಕಲ್ಮಾಡಿ ಜಂಕ್ಷನ್ ಬಳಿ ಸರಣಿ ಅಪಘಾತ ನಡೆದಿದೆ.​ ​ಕಾರು ಉಡುಪಿ ಕಡೆಯಿಂದ ಮಲ್ಪೆಗೆ ಬರುತ್ತಿರುವ ಕಾರು ಚಾಲಕ ನಿಯಂತ್ರಣ ತಪ್ಪಿ ಮೂರು ಬೈಕ್ ಗಳಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ತಿಳಿದು ಬಂದಿದೆ.​ ಮೂರು ಬೈಕ್ ಸವಾರರು ಗಂಭಿರ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಬೈಕ್ ಸವಾರ ಕಾನಂಗಿಯ ಪ್ರಶಾಂತ ,​ದಯಾನಂದ ಹಾಗೂ ಸುರೇಶ್​. ​.ಗಂಭೀರ ಗಾಯಗೊಂಡವರನ್ನು ನಗರ ಸಭೆ ಸದಸ್ಯ ಸುಂದರ್ ಕಲ್ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.​ ​ಕಾರು ಚಾಲಕ ಸುಕೇಶ್ ಕುಂದಾಪುರ ನಿವಾಸಿ ಎನ್ನಲಾಗಿದೆ.​ ​ಕಾರು ಡಿಕ್ಕಿಯಾದಾಗ ಪಕ್ಕದಲ್ಲಿ ಇದ್ದ ಮೀ​ನು ಮಾರುತಿದ್ದವರ  ಬುಟ್ಟಿ​ಗೂ   ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.ಮಲ್ಪೆ ಪೊಲೀಸರು ಸ್ಥಳಕ್ಕೆ ಕೂಡಲೇ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.ಸರಣಿ ಅಪಘಾತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!