ಧನಶ್ರೀ ಶಬರಾಯರ ಕಲಾ ಆದಾಯದ ಒಂದು ಭಾಗ ಗೋಸೇವೆಗೆ …!!

ವಯೋಲಿನ್ ಕಲಾವಿದೆಯ ಮಾದರಿ ನಡೆ .

ಕಲಾಸೇವೆಯಿಂದ ದೊಡ್ಡ ಮಟ್ಟಿನ ಸಂಪಾದನೆಯೂ ಇಲ್ಲ . ಆದರೆ ಬಂದ ಆದಾಯದಲ್ಲೇ ಚಿಕ್ಕ ಪಾಲನ್ನು ಗೋವುಗಳಿಗಾಗಿ ತೆಗೆದಿಡುವ ಈಕೆಯ ದೊಡ್ಡ ಗುಣ  ಮಾದರಿಯೆನಿಸಿದೆ . ಇತ್ತೀಚೆಗಷ್ಟೆ  ಒಂದಷ್ಟು  ಪಿಟೀಲು ವಿದ್ಯೆಯನ್ನು ಕಲಿತು ಮಂಗಳೂರುಉಡುಪಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ಸಂಗೀತ ಕಾರ್ಯಕ್ರಮಗಳಲ್ಲಿ ​ವಯೋಲಿನ್ ಸಹವಾದನ ಕಲಾವಿದೆಯಾಗಿ ಭಾಗವಹಿಸು ತ್ತಿರುವ  ಓರ್ವ ತರುಣ ಕಲಾವಿದೆ .‌   

ಹೀಗೆ ಪ್ರತೀ ಕಾರ್ಯಕ್ರಮದಿಂದ  ಬಂದ ಆದಾಯದ ಒಂದು ಸಣ್ಣ ಪಾಲನ್ನು ಗೋಸೇವೆಗಾಗಿ ಮೀಸಲಿಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾಳೆ. ಸುಮಾರು 4-5 ವರ್ಷಗಳಿಂದ ಹೀಗೆ ಒಟ್ಟು ಸಂಗ್ರಹಿಸಿಟ್ಟ ಮೂವತ್ತು ಸಾವಿರ ರೂಪಾಯಿಯನ್ನು (30 ಸಾವಿರ) ನೀಲಾವರ ಗೋಶಾಲೆಗೆ ಶುಕ್ರವಾರ ಹಸ್ತಾಂತರಿಸಿ ಮಾದರಿಯೆನಿಸಿದ್ದಾಳೆ .

ಈಕೆ ಧನಶ್ರೀ ಶಬರಾಯ . ಮಂಗಳೂರು ಕೊಂಚಾಡಿ ಲ್ಯಾಂಡ್ ಲಿಂಕ್ಸ್ ಬಡಾವಣೆಯ ನಿವಾಸಿ ಶುಭಮಂಗಳ ಮತ್ತು ಶ್ರೀಪತಿ ಶಬರಾಯರ ಸುಪುತ್ರಿ . ಪದವಿ ವ್ಯಾಸಂಗವನ್ನು ಶಾರದಾ ವಿದ್ಯಾಲಯದಲ್ಲಿ ಪೊರೈಸಿದ್ದಾಳೆ . ಎಳೆಯ ವಯಸ್ಸಿಂದಲೇ ಸಂಗೀತಾ ಸಕ್ತಿ ರೂಢಿಸಿಕೊಂಡ ಈಕೆ ಮಂಗಳೂರಿನ ಹಿರಿಯ ಕಲಾವಿದ ಟಿ ಜಿ ಗೋಪಾಲಕೃಷ್ಣನ್ ಅವರಲ್ಲಿ ವಯೋಲಿನ್ ಶಿಕ್ಷಣ ಪಡೆದಳು. ಬಳಿಕ ವಿದ್ವಾನ್ ಎಚ್ ಕೆ ನರಸಿಂಹಮೂರ್ತಿಯವರಲ್ಲಿ ಸುಮಾರು 5 ವರ್ಷಗಳಿಂದ ಕಲಾ ಶಿಕ್ಷಣ ಮುಂದುವರೆಸಿದ್ದಾಳೆ . ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸೀನಿಯರ್ ಶಿಕ್ಷ​ಣವನ್ನೂ ಪಡೆದಿದ್ದಾಳೆ .

ನೂರಾರು ಸಂಗೀತ ಕಾರ್ಯಕ್ರಮಗಳಲ್ಲಿ ಪಿಟೀಲು ನುಡಿಸಿ ಚಿರಪರಿಚಿತಳಾಗಿದ್ದರೂ ಈಕೆಯೊಳಗಿನ ಮಾನವೀಯ ಸಂವೇದನೆಯ ಗುಣದ ಪರಿಚಯ ಈಕೆ ಗೋಶಾಲೆಗೆ ನೀಡಿದ ದೇಣಿಗೆಯಿಂದ ಬೆಳಕಿಗೆ  ಬಂದಿದೆ. ಈಕೆಯಿಂದ ದೇಣಿಗೆ ಸ್ವೀಕರಿಸಿದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮನಸಾ ಅಭಿನಂದಿಸಿ ಹರಸಿದ್ದಾರೆ. ನಿಧಿ ಅರ್ಪಿಸಿದ ಬಳಿಕ ಶ್ರೀಗಳ ಮುಂದೆ ಅರ್ಧ ಘಂಟೆ ಪಿಟೀಲು  ನುಡಿಸಿದಾಗ  ಶ್ರೀಗಳು ಕಲಾ ಪ್ರತಿಭೆಯನ್ನೂ ಮೆಚ್ಚಿಕೊಂಡರು.

 
 
 
 
 
 
 
 
 
 
 

Leave a Reply