ಉಡುಪಿ ಜಿಲ್ಲಾ ವರ್ತಕರ ಸಂಘ ಹೊಟ್ಟೆ ಪಾಡಿಗಾಗಿ ಪ್ರತಿಭಟನೆಗೂ ಸಿದ್ದ

ಉಡುಪಿ : ಜಿಲ್ಲಾ ವರ್ತಕರ ಸಂಘ ಇತರೆ ಸಂಘಗಳ ಜೊತೆಗೆ ಇಂದು ಕಿದಿಯೂರು ಹೋಟೆಲ್ ನಲ್ಲಿ ಸಭೆ ನಡೆಸಿ ಉಡುಪಿ ಜಿಲ್ಲೆಗೆ ವಾರಂತ್ಯ ಕರ್ಪ್ಯೂ ಅವೈಜ್ಞಾನಿಕ ಜೊತೆಗೆ ಹಾಸ್ಯಸ್ಪದವೂ ಆಗಿದೆ ಬಹುತೇಕ 80 / ಅಂಗಡಿಗಳಿಗೆ ವ್ಯಪಾರ ಮಾಡಲೂ ಅನುವು ಮಾಡಿ ಉಳಿದ ಫ್ಯಾನ್ಸಿ, ಬಟ್ಟೆ , ಕಟ್ಟಿಂಗ್ ಶಾಪ್, ಎಲೆಟ್ರಿಕ್ ,ಬಂಗಾರ ,ಟೈಲರ್ಸ್ ಅಂಗಡಿಗೆ ಅವಕಾಶವಿಲ್ಲ ಈ ನೀತಿ ಸರಿಯೇ ? ಸರಕಾರ ಕೊಡಲೇ ಉಡುಪಿ ಜಿಲ್ಲೆಗೆ ಹಾಕಿದ ವಾರಂತ್ಯ ಕರ್ಪ್ಯೂರದ್ದು ಪಡಿಸುವಂತೆ, ಬೇಡಿಕೆ ಈಡೇರಿದೆದ್ದಲ್ಲಿ ಹೊಟ್ಟೆ ಪಾಡಿಗಾಗಿ ಪ್ರತಿಭಟನೆಗೂ ಸಿದ್ದ ಎಂದು ಜಿಲ್ಲಾ ವರ್ತಕರ ಸಂಘದ ಅಧ್ಯಕ್ಷ ಐರೋಡಿ ಸಹನ ಶೀಲ ಪೈ ಕರೆ ನೀಡಿದರು.                         

ಉಡುಪಿ ಜಿಲ್ಲಾ ಹಿತರಕ್ಷಣೆ ವೇದಿಕೆಯ ಅಧ್ಯಕ್ಷ ಮಹಮದ್ ಮುಲ್ಲಾನ ಮಾತನಾಡಿ ಕೊರೋನಾ ವಿರುದ್ಧ ಹೋರಾಡಲು ಎಲ್ಲಾ ವರ್ತಕರ ಸಹಕಾರವಿದೆ ಎಂದರು. ಮಾಲಕರ,ನೌಕರರ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ತೀರ್ಮಾನಿಸಲಾಯಿತು.

ಉಡುಪಿ ತಾಲೋಕ್ ಸವಿತಾ ಸಮಾಜದ ಅಧ್ಯಕ್ಷ ರಾಜು ಭಂಡಾರಿ, ಜಿಲ್ಲಾ ಟೈಲರ್ ಅಶೋಷಿಯನ್ ಮಾಜಿ ಅಧ್ಯಕ್ಷ ವಿಠ್ಠಲ್ ಶೆಟ್ಟಿ,ರಾಜಸ್ತಾನ್ ವ್ಯಾಪಾರಿ ಛಗನ್ ಸಿಂಗ್ , ರಾಜೇಶ್,ವರ್ತಕ ಸಂಘದ ಉಪಾಧ್ಯಕ್ಷ ವಸಂತ ಭಟ್, ಕಾರ್ಯದರ್ಶಿ ನಾಗರಾಜ್, ವಿಶ್ವನಾಥ್ ಗಂಗೊಳ್ಳಿ , ಶ್ರೀಧರ್ ನಾಯಕ್, ವಿಶ್ವನಾಥ್ ಬಾಳಿಗಾ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply