Janardhan Kodavoor/ Team KaravaliXpress
24.6 C
Udupi
Thursday, July 7, 2022
Sathyanatha Stores Brahmavara

ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ಹೊಸ್ಕರೆ ಶಿವ ಸ್ವಾಮಿ ಇನ್ನಿಲ್ಲ

ಉಡುಪಿ: ಎಂ ಜಿ .ಎಂ ಕಾಲೇಜಿನ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥರು ಸುದೀರ್ಘ ಕಾಲ ಕನ್ನಡ ವಿಭಾಗದ ಹಿರಿಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಡಾ.ಶಿವ ಸ್ವಾಮಿ(68) ಶನಿವಾರ ರಾತ್ರಿ 8.30 ಕ್ಕೆ ತೀವ್ರ ಹೃದಯ ಘಾತದಿಂದ ಬೆಂಗಳೂರಿನ ಸ್ವಗೃಹದಲ್ಲಿ ನಿಧನರಾದರು.

ಕನ್ನಡ ಸಾಹಿತ್ಯ ಲೇೂಕಕ್ಕೆ ಅನುಪಮ ಕೊಡುಗೆ ನೀಡಿರುವ ಡಾ.ಹೊಸ್ಕರೆ ಕಡೆಂಗೇೂಡ್ಲು ಕವಿ ಸಾಹಿತ್ಯ ಪ್ರಶಸ್ತಿಗೂ ಭಾಜನರಾಗಿದ್ದರು.ಎನ್.ಆರ್.ಪುರ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ ಕೀತಿ೯ ಅವರಿಗಿದೆ. ನಾಟಕ ವಿಮರ್ಶಕರಾಗಿಯೂ ಇವರ ವಿಮರ್ಶಾತ್ಮಕ ಲೇಖನಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಉತ್ತಮ ವಾಗ್ಮಿಗಳಾಗಿದ್ದ ಇವರು, ಭಾಷಾಬೇೂಧನಾ ವಿಧಾನದ ಕುರಿತಾಗಿ ಸಂಶೇೂಧನಾ ಪ್ರಬಂಧ ಮಂಡಿಸಿ ಡಾಕ್ಟರೇಟ್‌ ಪದವಿಗಳಿಸಿದ್ದಾರೆ.

ì

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!