Janardhan Kodavoor/ Team KaravaliXpress
23.6 C
Udupi
Thursday, December 8, 2022
Sathyanatha Stores Brahmavara

ಹಿರಿಯಡ್ಕದಿಂದ ಕಾರ್ಕಳ ಹೋಗುವ ರಾಜ್ಯ ಹೆದ್ದಾರಿ ಹೊಂಡಮಯ

ಹಿರಿಯಡ್ಕದಿಂದ – ಕಾರ್ಕಳ ಹೋಗುವ ರಾಜ್ಯ ಹೆದ್ದಾರಿ, ಕಾಪು ಕ್ಷೇತ್ರದ  ಕೊಂಡಾಡಿ ಎಂಬಲ್ಲಿ ಸುಮಾರು 15ವರುಷಗಳಿಂದ ಇದೇ ರೀತಿ ಹೊಂಡಗಳಾಗುತವೆ. ಮಳೆ ಕಡಿಮೆಯಾದಾಗ ಮಣ್ಣನ್ನು ಹಾಕಿ ಹೊಂಡ ತುಂಬಿಸುತ್ತಾರೆ. ಬೇಸಿಗೆಯಲ್ಲಿ ಅದಕ್ಕೆ ಡಾಮರನ್ನು ಸವರಿ ಕಪ್ಪು ಮಾಡುತ್ತಾರೆ. ಪುನಹಃ ಮಳೆ ಬಂದಾಕ್ಷಣ ಹೊಂಡಗಳಾಗುತವೆ.

ಎಷ್ಟು ವರುಷ ಗಳಾದರೂ ಇದಕ್ಕೆ ಪರಿಹಾರವೇ ಇಲ್ಲ. ಈ ಜಿಲ್ಲೆಗೆ ಬುದ್ದಿವಂತರ ಜಿಲ್ಲೆ ಎಂದೇಳುತ್ತಾರೆ. ಆದರೂ ಬುದ್ದಿವಂತ ಜನರೂ ಇಲ್ಲ, ಇಂಜೀನಿಯರೂ ಇಲ್ಲ ಎಂದು ಹೇಳ ಬಹುದು. ಇದಕ್ಕೆ ನಮ್ಮ ಜಿಲ್ಲೆಯಲ್ಲಿ ತಜ್ಞ ಇಂಜೀನಿಯರೂ  ಇಲ್ಲದೆ ಇದ್ದರೆ ಬೇರೆ ಜಿಲ್ಲೆಯ ಇಂಜಿನಿಯರ್ ಅವರಿಂದ  ಮಾಹಿತಿಯನ್ನು ಪಡೆದು ಶಾಶ್ವತವಾಗಿ ಈ ರಸ್ತೆಯನ್ನು ಮಾಡುವರೇ, ಅಥವಾ  ಅಷ್ಟು ಜಾಗಕ್ಕೆ ಕಾಂಕ್ರಟೀಕರಣವಾದರೂ ಮಾಡ ಬಹುದಲ್ಲಾ.

ದಯಮಾಡಿ ಸಂಬಂಧ ಪಟ್ಟವರು  ಸಾರ್ವಜನಿಕರ  ಹಿತದ್ರಷ್ಟಿಯಿಂದ ಈ ಕಡೆ ಗಮನ ಹರಿಸಿ ಶಾಶ್ವತ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕಾಗಿ  ಮಾಜಿ ನಗರಸಭಾ ಸದಸ್ಯ ಬಿ. ದೇವೇಂದ್ರ ಪ್ರಭು, ಮಣಿಪಾಲ ಇವರು ವಿನಂತಿಸಿದ್ದಾರೆ

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!