ಮನೆ ಬೆಳಗಿದ ಜೇಷ್ಠ ಹುಟ್ಟುಹಬ್ಬ ಸಂಭ್ರಮ

ಉಡುಪಿ : ಉಡುಪಿ ನಗರದ ಕಸ್ತೂರ್ಬಾ ನಗರ ವಾರ್ಡಿನ ಚಿಟ್ಟಾಡಿಯ ದಲಿತ ಸಮುದಾಯದ ನಾರಾಯಣರ ಮನೆಗೆ ಉಚಿತ ವಿದ್ಯುತ್ ಸಂಪರ್ಕ ಉದ್ಘಾಟಿಸುದರ ಮೂಲಕ ಜೇಷ್ಠ ತನ್ನ 5ನೇ ಹುಟ್ಟುಹಬ್ಬ ಆಚರಿಸಿಕೊಂಡಳು.

ಈ ಮನೆಗೆ ಕಳೆದ20 ವರ್ಷಗಳಿಂದ ವಿದ್ಯುತ್ ಸಂಪರ್ಕವೇ ಇರುವುದಿಲ್ಲ. ಈ ಮನೆಯ ಸಂಪೂರ್ಣ ವಿದ್ಯುತ್ ಸಂಪರ್ಕದ ವೆಚ್ಚವನ್ನು ಉಡುಪಿ ಕಲ್ಸಂಕ ಪಿ ವಿಶ್ವನಾಥ ಶೆಣೈ ಮತ್ತು ಅನನ್ಯ ಶೆಣೈ ದಂಪತಿಗಳ ಸುಪುತ್ರಿ ಇಂದು ತನ್ನ 5 ನೆ ವರ್ಷದ ಹುಟ್ಟುಹಬ್ಬ ಆಚರಿಸುತ್ತಿರುವ ಜೇಷ್ಠ ಶೆಣೈ ನೀಡಿ ಹುಟ್ಟುಹಬ್ಬದ ಆಚರಣೆಗೆ ಹೊಸ ಆಯಾಮ ನೀಡಿ ಆದರ್ಶ ಮೆರೆದರು.

ಮೆಸ್ಕಾಂ ನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗಣರಾಜ ಭಟ್, ಮಾತನಾಡಿ ಸಾಮಾಜಿಕ ಚಟುವಟಿಕೆಯ ಮೂಲಕ ಅದರಲ್ಲೂ ಬಡವರ,ದೀನದಲಿತರ ಮನೆಗೆ ಬೆಳಕು ನೀಡಿದ ಈ ರೀತಿಯ ಹುಟ್ಟುಹಬ್ಬದ ಆಚರಣೆ ಎಲ್ಲರಿಗೂ ಮಾದರಿಯಾಗಲಿ ಎಂದು ಹೇಳಿದರು. ಮುಂದೆ 100ನೇ ಮನೆಯ ಉಚಿತ ವಿದ್ಯುತ್ ಸಂಪರ್ಕದ ವೆಚ್ಚವನ್ನು ತಾವು ನೀಡುವುದಾಗಿ ಹೇಳಿದರು.

ನಗರಸಭಾ ಸದಸ್ಯ ರಾಜು, ಉಪಸ್ಥಿತರಿದ್ದು ಆಸರೆಯ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಪ.ವಸಂತ ಭಟ್ ಅಧ್ಯಕ್ಷತೆ ವಹಿಸಿದರು. ಆಸರೆ ಚಾರಿಟೇಬಲ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ ಸ್ವಾಗತಿಸಿ, ಕೋಶಧಿಕಾರಿ ಸತೀಶ್ ಕುಲಾಲ್ ವಂದಿಸಿದರು.

ಗಣೇಶೋತ್ಸವ ಸಮಿತಿಯ ಸದಸ್ಯರಾದ ರಾಕೇಶ್ ಜೋಗಿ, ಚೈತ್ರ ಕುಂದರ್ ಸ್ಥಳೀಯರಾದ ಸತೀಶ್ ಪೂಜಾರಿ ,ಆನಂದ ಮತ್ತು ಸ್ಥಳೀಯರು ಉಪಸ್ಥಿತರಿದ್ದರು. ಈ ಮನೆಯ ವಿದ್ಯುತ್ ಸಂಪರ್ಕದ ವ್ಯವಸ್ಥೆಯನ್ನು ಮಂಜುನಾಥ್ ಎಲೆಕ್ಟ್ರಿಕಲ್ಸ್ ಕುಂಜಿಬೆಟ್ಟು ಇದರ ನಾಗರಾಜ್ ಪ್ರಭು ಚಕ್ರತೀರ್ಥ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply