Janardhan Kodavoor/ Team KaravaliXpress
25.6 C
Udupi
Monday, June 27, 2022
Sathyanatha Stores Brahmavara

ದ.ಕ ಹಾಲು ಉತ್ಪಾದಕರ ಒಕ್ಕೂಟದಿಂದ ಜೂನ್ ತಿಂಗಳು ಪೂರ್ತಿ `ಹೆಚ್ಚು ಹಾಲು ಕುಡಿಯಿರಿ’ ಯೋಜನೆ

ಮಂಗಳೂರು: ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟ ದಲ್ಲಿ ಹಾಲು ಉತ್ಪಾದನೆ ಹೆಚ್ಚಳವಾಗಿದೆ.ಲಾಕ್ ಡೌನ್ ಕಾರಣದಿಂದಾಗಿ ಶುಭ ಸಮಾರಂಭ, ದೇವಸ್ಥಾನ, ವಿದ್ಯಾಸಂಸ್ಥೆ, ಹಾಸ್ಟೆಲ್, ಹೋಟೆಲ್ ಗಳಿಗೆ ನಿರ್ಬಂಧವಿದೆ. ಹೀಗಾಗಿ ಹಾಲು ಮತ್ತು ಮೊಸರು ಮಾರಾಟದಲ್ಲಿ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ.

ಇದರಿಂದ ಜೂನ್ ತಿಂಗಳು ಪೂರ್ತಿ ಹೆಚ್ಚು ಹಾಲು ಕುಡಿಯಿರಿ ಎಂಬ ವಿನೂತನ ಯೋಜನೆ ಜಾರಿಗೊಳಿಸುತ್ತಿರುವುದಾಗಿ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ಕೊಡವೂರು ರವಿರಾಜ ಹೆಗ್ಡೆ ತಿಳಿಸಿದ್ದಾರೆ. ರಾಜ್ಯಾದ್ಯಂತ ಕೊರೊನಾ 2ನೇ ಅಲೆ ತೀವ್ರವಾಗಿದ್ದು, ಕಳೆದ ಏ.28ರಿಂದ ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಕ್ಲಿಷ್ಟಕರ ಪರಿಸ್ಥಿತಿಯಲ್ಲಿಯೂ ಹಾಲು ಉತ್ಪಾದಕರು ಸಂಘಗಳಿಗೆ ಗುಣಮಟ್ಟದ ಹಾಲು ಪೂರೈಸುತ್ತಿದ್ದಾರೆ. ನಂದಿನಿ ಬಳಗ ಜೀವದ ಹಂಗು ತೊರೆದು, ಗ್ರಾಹಕರಿಗೆ ಅಗತ್ಯ ಸೇವೆಗಳಲ್ಲಿ ಬಹು ಮುಖ್ಯವಾದ ಹಾಲು ಪೂರೈಸುವ ಮೂಲಕ ಗ್ರಾಹಕರ ಸೇವೆಯಲ್ಲಿ ತೊಡಗಿದ್ದಾರೆ.

ಹಾಲನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಲು ಹಾಗೂ ವಿಶ್ವ ಹಾಲು ದಿನಾಚರಣೆ ಅಂಗವಾಗಿ ಜೂ. 1ರಿಂದ 30ರ ವರೆಗೆ ಎಲ್ಲಾ ಮಾದರಿಯ ನಂದಿನಿ ಹಾಲು 500 ಮಿ.ಲೀ. ಹಾಗೂ 1 ಲೀ. ಹಾಲಿನ ಪೊಟ್ಟಣದ ಜೊತೆ ಅನುಕ್ರಮವಾಗಿ 20 ಮಿ.ಲೀ. ಹಾಗೂ 40 ಮಿ.ಲೀ. ಹಾಲನ್ನು ಉಚಿತವಾಗಿ ಗ್ರಾಹಕರಿಗೆ ನೀಡಲಾಗುತ್ತದೆ. ಗ್ರಾಹಕರು ಅದರ ಪ್ರಯೋಜನ ಪಡೆದುಕೊಂಡು ಆರೋಗ್ಯ ವೃದ್ಧಿಸಿ, ಸದೃಢರಾಗುವಂತೆ ದಕ್ಷಿಣ ಕನ್ನಡ ಹಾಲು ಒಕ್ಕೂಟ ಅಧ್ಯಕ್ಷ ರವಿರಾಜ ಹೆಗ್ಡೆ ತಿಳಿಸಿದ್ದಾರೆ.ಕರ್ನಾಟಕ ಹಾಲು ಮಹಾಮಂಡಲ ಅಧೀನದಲ್ಲಿರುವ 14 ಒಕ್ಕೂಟಗಳಲ್ಲಿಯೂ ಏಕಕಾಲಕ್ಕೆ ಈ ಯೋಜನೆ ಜಾರಿಯಾಗಲಿದೆ.

ಹಾಲು ಒಕ್ಕೂಟದ ಸಿಬ್ಬಂದಿ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗಳನ್ನು ಕೊರೋನಾ ವಾರಿಯರ್ಸ್ ಎಂದು ಗುರುತಿಸುವಂತೆ ಕೆಎಂಎಫ್ ಮತ್ತು ದಕ್ಷಿಣ ಕನ್ನಡ ಹಾಲು ಒಕ್ಕೂಟ ನಿದೇರ್ಶಕ ಕಾಪು ದಿವಾಕರ ಶೆಟ್ಟಿ ಆಗ್ರಹಿಸಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!