Janardhan Kodavoor/ Team KaravaliXpress
30.6 C
Udupi
Tuesday, August 16, 2022
Sathyanatha Stores Brahmavara

ಗುರುಪರಂಪರೆಯ ಸ್ಮರಣೆ ನಿರಂತರ ಇರಬೇಕು : ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ

ಉಡುಪಿ : ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ಪರ್ಯಾಯ ಮಂಗಲೋತ್ಸವದ ‘ವಿಶ್ವಾರ್ಪಣಮ್’ ಸಮಾರಂಭದಲ್ಲಿ,ಪರ್ಯಾಯ ಪೀಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು,ಹಿರಿಯ ವಿದ್ವಾಂಸ ಗುರುರಾಜ ಜೋಶಿ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ,ಖ್ಯಾತ ಇತಿಹಾಸ ತಜ್ಞ ಡಾ.ಜಗದೀಶ್ ಶೆಟ್ಟಿ,ವೈದ್ಯಕೀಯ ಕ್ಷೇತ್ರದ ಮಣಿಪಾಲದ ಡಾ.ಟಿ.ಎಂ.ಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಶಿಕಿರಣ ಉಮಾಕಾಂತ್, ದಂತವೈದ್ಯ ಡಾ.ವಿಜಯೇಂದ್ರ ವಸಂತ್ ರನ್ನು ಸನ್ಮಾನಿಸಿದರು.

ಬಳಿಕ ಆಶಿರ್ವಚನ ನೀಡಿದರು.ಜ್ಞಾನ ಪಡೆಯುವುದು ಮನುಷ್ಯನ ಆದ್ಯ ಕರ್ತವ್ಯ,ಸಜ್ಜನರ ಸಂಗದಿಂದಲೇ ಅದು ಸಾಧ್ಯ.ನಮ್ಮ ಸುತ್ತ ಉದಾಸೀನತೆಯಿಂದ ಇರುವವರು, ಹೊಗಳುವವರು, ತೆಗಳುವವರು ಇದ್ದೇ ಇರುತ್ತಾರೆ,ನಮ್ಮ ಕರ್ತವ್ಯಕ್ಕೆ ಮಾತ್ರ ಮಹತ್ವ ಕೊಡಬೇಕು.ಅಂಥ ಕರ್ತವ್ಯ ನಡೆಸಲು ಅನುಕೂಲವಾದ ರಾಷ್ಟ್ರ ಕಟ್ಟುವಲ್ಲಿ ನಾವು ತೋಕ ಕಟ್ಟಿ ನಿಲ್ಲಬೇಕು.ಇದರಿಂದ ನಮ್ಮ ಆಂತರಿಕ ಅಭ್ಯುದಯ ಇದೆ ಎಂದು ಅನುಗ್ರಹಿಸಿದರು.

ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿಯವರು,ಗುರುಪರಂಪರೆಯ ಸ್ಮರಣೆ ನಿರಂತರ ಇರಬೇಕು,ಮೊದಲಿನ ಕಾಲಕ್ಕಿಂತ ಹೆಚ್ಚಿನ ಅನುಕೂಲ ಇಂದಿನ ಕಾಲದಲ್ಲಿದೆ. ಸಂವಹನ,ಮಾಧ್ಯಮ,ಸಾರಿಗೆ ಎಲ್ಲವು ಮೊದಲಿಗಿಂತ ಚೆನ್ನಾಗಿದೆ.ಆದರೂ ನಮಗೆ ನೆಮ್ಮದಿ ಇಲ್ಲ ಎಂದರೆ ಧಾರ್ಮಿಕ ಮೌಲ್ಯಗಳಿಂದ ವಂಚಿತರಾಗುತ್ತಿದ್ದ್ದೇವೆ ಎಂದರ್ಥ,ನಿರೀಕ್ಷೆಗಳ ಹೆಚ್ಚಳವೇ ದುಃಖಕ್ಕೆ ಕಾರಣ ಎಂದರು.

ಖ್ಯಾತ ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ “ಹಳೆಬೇರು-ಹೊಸಚಿಗುರು – ಬೆಸುಗೆ ಹೇಗೆ” ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಮಠದ ವ್ಯವಸ್ಥಾಪಕ ಗೋವಿಂದರಾಜ್ ಸ್ವಾಗತಿಸಿದರು. ಮಠದ ಆಸ್ಥಾನ ವಿದ್ವಾಂಸ ಕೃಷ್ಣರಾಜ ಭಟ್ ಕುತ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!