Janardhan Kodavoor/ Team KaravaliXpress
30.6 C
Udupi
Wednesday, August 17, 2022
Sathyanatha Stores Brahmavara

​ಗುಲಾಬಿ ಆಂದೋಲನ – ಜಾಥಾ ಕಾರ್ಯಕ್ರಮ

ಉಡುಪಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಮತ್ತು​ ತಾಲ್ಲೂಕು ಆರೋಗ್ಯಾಧಿ ಕಾರಿಗಳು ಕುಂದಾಪುರ ಮತ್ತು ಕರ್ನಾಟಕ ಪಬ್ಲಿಕ್ ಶಾಲೆ ಕೋಟೇಶ್ವರ ವಿದ್ಯಾರ್ಥಿಗಳ​ ಸಹಭಾಗಿತ್ವದೊಂದಿಗೆ ಗುಲಾಬಿ ಆಂದೋಲನ ಜಾಥಾ ಕಾರ್ಯಕ್ರಮವು ಶುಕ್ರವಾರ ಕೋಟೇಶ್ವರದಲ್ಲಿ ನಡೆಯಿತು.​​

ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ ಇವರು ಜಾಥಾ ಕಾರ್ಯಕ್ರಮಕ್ಕೆ ಹಸಿರು​ ನಿಶಾನೆ ತೋರಿದರು.​ ಸದರಿ ಜಾಥಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳಿಂದ ಒಂದು ಗುಲಾಬಿ ಹೂ ನೀಡುವುದರ ಮೂಲಕ ಪ್ರತಿ ಅಂಗಡಿಯ​ ಮಾಲೀಕರಿಗೆ ತಂಬಾಕು ತ್ಯಜಿಸಿ, ಜೀವನವನ್ನು ಆಯ್ದಕೊಳ್ಳಿ ಮತ್ತು ತಂಬಾಕು ಮುಕ್ತ ನಾಡನ್ನು ನಿರ್ಮಿಸೋಣ ಎಂಬ​ ಘೋಷಣೆಯೊಂದಿಗೆ ಅರಿವು ಮೂಡಿಸಲಾಯಿತು.

ಸಭಾ ಕಾರ್ಯಕ್ರಮವನ್ನು ಕೋಟೇಶ್ವರ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಲಾಯಿತು.​ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಪ್ರಾಸ್ತವಿಕವಾಗಿ ಮಾತನಾಡಿ, ತಂಬಾಕು ಸೇವನೆಯು​ ಜೀವನಕ್ಕೆ ಮಾರಕವಾಗಿದ್ದು, ಅದರಿಂದ ವಿವಿಧ ರೀತಿಯ ಕಾಯಿಲೆಗಳು ಬರುವ ಸಾಧ್ಯತೆ ಇದ್ದು, ಪ್ರಸ್ತುತ ಕೋವಿಡ್ -19​ ಕೂಡ ಅತೀ ವೇಗವಾಗಿ ಹರಡಲು ಕಾರಣವಾಗಿದೆ ಎಂದರು.

ತಂಬಾಕನ್ನು ನಿಯಂತ್ರಣಕ್ಕೆ ತರಲು ಆರೋಗ್ಯ ಇಲಾಖೆಯಡಿಯಲ್ಲಿ ತಂಬಾಕು ನಿಯಂತ್ರಣ ಕೋಶ ಇದ್ದು, ಪ್ರತೀ​ ತಿಂಗಳು ಜಿಲ್ಲಾದ್ಯಂತ ಪ್ರತೀ ತಾಲೂಕಿನ ಎಲ್ಲಾ ಅಂಗಡಿ/ ಹೋಟೇಲ್‌ಗಳಲ್ಲಿ ಕೋಟ್ಪಾ -2003 ಕಾಯ್ದೆಯಡಿ ದಾಳಿ​ ನಡೆಸಿ, ಸೂಚನಾ ಘಲಕಗಳಿಲ್ಲದೇ ಮಾರಾಟ ಮಾಡುತ್ತಿರುವಂತಹ ಅಂಗಡಿ ಮಾಲೀಕರಿಗೆ ದಂಡ ವಿಧಿಸಿ ಕಡ್ಡಾಯವಾಗಿ​ ಸೂಚನಾ ಘಲಕಗಳನ್ನು ಅಳವಡಿಸುವಂತೆ ಸೂಚಿಸಲಾಗುತ್ತದೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರೋಗ್ಯ​ ಇಲಾಖೆಯಡಿಯಲ್ಲಿ ನಡೆಯುವ ತಂಬಾಕು ದುಷ್ಪರಿಣಾಮದ ಜಾಗೃತಿ ಅಭಿಯಾನಕ್ಕೆ ಹೆಮ್ಮೆ ವ್ಯಕ್ತ ಪಡಿಸುತ್ತಾ,​ ತಂಬಾಕನ್ನು ನಿಯಂತ್ರಣ ತರುವ ನಿಟ್ಟಿನಲ್ಲಿ ಎಲ್ಲರೂ ಒಟ್ಟುಗೂಡಿ ಕಾರ್ಯನಿರ್ವಹಿಸೋಣ ಎಂದರು.

ಕೋಟೇಶ್ವರ ಕರ್ನಾಟಕ ಪಬ್ಲಿಕ್ ಶಾಲೆಯ ದೈಹಿಕ ಶಿಕ್ಷಕ ಮಂಜುನಾಥ ಹೊಳ್ಳ, ತಂಬಾಕು ಕುರಿತು ವಿದ್ಯಾರ್ಥಿ ಗಳು​ ಹೆಚ್ಚು ಜಾಗೃತಗೊಂಡು ತಮ್ಮ ಕುಟುಂಬದವರ ಆರೋಗ್ಯವನ್ನು ಸುಸ್ಥಿರದಿಂದ ಕಾಪಾಡಿಕೊಳ್ಳಲಿ, ಇಂದಿನ ಮಕ್ಕಳೇ​ ನಾಳಿನ ಪ್ರಜೆಗಳು ಎಂಬ ನಾಣ್ಣುಡಿಯೊಂದಿಗೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋಧಿಸಿದರು.

ಕಾರ್ಯಕ್ರಮದಲ್ಲಿ ಕೋಡಿ ಪ್ರಾ.ಆ.ಕೇಂದ್ರದ ವ್ಯೆದ್ಯಾಧಿಕಾರಿ ಡಾ.ಉಮೇಶ್ ನಾಯ್ಕ, ಕೋಟೇಶ್ವರ ಸ.ಪ.ಪೂ​ ಕಾಲೇಜು ಪ್ರಾಂಶುಪಾಲ ಡೇನಿಸ್ ಬಾಂಜಿ, ಶಾಲಾ ಸಹ ಶಿಕ್ಷಕ ಪ್ರದೀಪ್ ಶಾನುಭೋಗ, ತಾಲೂಕು ಕಾರ್ಮಿಕ ಅಧಿಕಾರಿ​ ಪ್ರಸನ್ನ, ಕುಂದಾಪುರದ ಹಿರಿಯ ಆರೋಗ್ಯ ಸಹಾಯಕ ರಮೇಶ್ ಶೆಟ್ಟಿ.

]
ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಜಿಲ್ಲಾ​ ಸಲಹೆಗಾರ್ತಿ ಮಂಜುಳಾ ಶೆಟ್ಟಿ, ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಸಮಾಜ ಕಾರ್ಯಕರ್ತೆ ಶೈಲಾ ಶಾಮನೂರು,​ ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.​ ಕ್ಷೇತ್ರ ದೈಹಿಕ ಪರಿವೀಕ್ಷಣಾಧಿಕಾರಿ ದತ್ತಾತ್ರೇಯ ವಂದಿಸಿದರು.​

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!