ಗುಂಡ್ಮಿಯಲ್ಲಿ ರಂಗಸಂವಾದ ಕಾರ್ಯಕ್ರಮ

ಕೋಟ: ಯಕ್ಷಗಾನ ಮೊದಲಿನಂತೆ ಉಳಿಯಬೇಕಾದರೆ ಸರಕಾರ ಅದನ್ನು ಎತ್ತಿಹಿಡಿಯಬೇಕು. ಬೇಕಾಗುವಂತಹ ವಾತಾವರಣವನ್ನು ಪೂರಕ ಸ್ಥಿತಿ- ಗತಿಯನ್ನು ಸರಕಾರ ಒದಗಿಸಬೇಕು ಎಂದು ಸಾಂಪ್ರದಾಯಿಕ ಯಕ್ಷಗಾನ ರಂಗದ ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪ ನುಡಿದರು. 

ರಸರಂಗ ಕೋಟವು ಸಮಸ್ತರು ಬೆಂಗಳೂರು ಇದರ ಸಹಯೋಗದಲ್ಲಿ , ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಸಹಕಾರದಲ್ಲಿ ಸದಾನಂದ ರಂಗಮಂಟಪ ಗುಂಡ್ಮಿಯಲ್ಲಿ ನಡೆದ ರಂಗಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದಿದ್ದರು. 

ಸಂಪ್ರದಾಯ ಬಲ್ಲ ಹಳೆಯ ಕಲಾವಿದರನ್ನು ಕಲೆಹಾಕಿ,ಉಡುಪಿ ಜಿಲ್ಲೆಯ ಯಕ್ಷಗಾನದ ಕುರಿತಾದ ಯೋಜನೆ-ಯೋಚನೆಗಳನ್ನ ರೂಪಿಸಿಕೊಂಡು ಅದನ್ನ ಅನುಷ್ಠಾನಕ್ಕೆ ತಂದರೆ ಈ ಭಾಗದ ಪಾರಂಪರಿಕ ಕಲೆ ಉಳಿಯುತ್ತದೆ ಎಂದರು.

 ಐರೋಡಿಯವರು ಸಾಂಪ್ರದಾಯಿಕ ಯಕ್ಷಗಾನ ಹಾಗೂ ಯಕ್ಷಗಾನದ ಪಾರಂಪರಿಕ ಶೈಲಿಯ ಓರ್ವ ಶ್ರೇಷ್ಟ ಕಲಾವಿದ. ಇಂತಹ ಕಲೆ ಮುಂದೆಯೂ ಉಳಿಯಬೇಕಾದರೆ ಅದನ್ನು ಕಲಿಸುವ -ಕಲಿಯುವ ಕೆಲಸವಾಗಬೇಕು ಅಂತಹ ಆಸಕ್ತ ಕಲಾಕೇಂದ್ರಗಳಿಗೆ ಸರಕಾರದ ಪ್ರೋತ್ಸಾಹ ಬೇಕು ಎಂದರಲ್ಲದೆ ಸರಕಾರವು ಆ ಉದ್ದೇಶಕ್ಕಾಗಿಯೇ ಕಲಾಕೇಂದ್ರಗಳನ್ನ ಪ್ರೋತ್ಸಾಹಿಸಬೇಕು ಅಂತರರಾಷ್ಟ್ರೀಯ ಖ್ಯಾತಿಯ ರಂಗನಿರ್ದೇಶಕರು ಗೋಷ್ಟಿಯ ಅಧ್ಯಕ್ಷ ಗೋಪಾಲಕೃಷ್ಣ ನಾಯರಿಯವರು ನುಡಿದರು.

ಕಾರ್ಕಳದಲ್ಲಿ ಮುಂದೆ ಬರಲಿರುವ ಯಕ್ಷರಂಗಾಯಣ ಈ ಭಾಗದ ಪ್ರಾದೇಶಿಕ ಯಕ್ಷಗಾನಕ್ಕೆ ಹೆಚ್ಚಿನ ಮನ್ಮಣೆಯನ್ನು ನೀಡಲಿ,ಅಲ್ಲಿ ಸಾಂಪ್ರದಾಯದ ಯಕ್ಷರೆಪರ್ಟ ಅರಂಭವಾಗಲಿ ಎಂದು ಸಂವಾದಕರಲ್ಲಿ ಒಬ್ಬರಾದ ಸುರೇಂದ್ರ ಪಣಿಯೂರು ಅಭಿಪ್ರಾಯಿಸಿದರು.

 ಸಂವಾದಕ ಮಿತ್ರರಾಗಿ ಸದಾನಂದ ಪಾಟೀಲ್, ಸುರೇಂದ್ರ ಪಣಿಯೂರು, ಗಣೇಶ್ ಜಿ.ಚಲ್ಲೆಮಕ್ಕಿ,ಪ್ರೊ.ಸಂಜೀವ ಗುಂಡ್ಮಿ ಸಹಕರಿಸಿದರು. ಕಲಾಕೇಂದ್ರದ ಸಂಚಾಲಕ ರಾಜಶೇಖರ ಹೆಬ್ಬಾರ್,ರಸರಂಗದ ಅಧ್ಯಕ್ಷೆ ಸುಧಾ ಮಣೂರು ಉಪಸ್ಥಿತರಿದ್ದರು. ರಾಮಚಂದ್ರ ಐತಾಳ ಗುಂಡ್ಮಿ ಗೋಷ್ಟಿಯನ್ನು ನಿರ್ವಹಿಸಿದರು.

ರಸರಂಗ ಕೋಟವು ಸಮಸ್ತರು ಬೆಂಗಳೂರು ಇದರ ಸಹಯೋಗದಲ್ಲಿ ,ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ದದ ಸಹಕಾರದಲ್ಲಿ ಸದಾನಂದ ರಂಗಮಂಟಪ ಗುಂಡ್ಮಿಯಲ್ಲಿ ನಡೆದ ರಂಗಸಂವಾದ ಕಾರ್ಯಕ್ರಮದಲ್ಲಿಸಾಂಪ್ರದಾಯಿಕ ಯಕ್ಷಗಾನ ರಂಗದ ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪ ನುಡಿದರು. 

ಸಂವಾದಕ ಮಿತ್ರರಾಗಿ ಸದಾನಂದ ಪಾಟೀಲ್,ಸುರೇಂದ್ರ ಪಣಿಯೂರು,ಗಣೇಶ್ ಜಿ.ಚಲ್ಲೆಮಕ್ಕಿ,ಪ್ರೊ.ಸಂಜೀವ ಗುಂಡ್ಮಿ ಸಹಕರಿಸಿದರು. ಕಲಾಕೇಂದ್ರದ ಸಂಚಾಲಕ ರಾಜಶೇಖರ ಹೆಬ್ಬಾರ್, ರಸರಂಗದ ಅಧ್ಯಕ್ಷೆ ಸುಧಾ ಮಣೂರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply