Janardhan Kodavoor/ Team KaravaliXpress
27.6 C
Udupi
Monday, December 5, 2022
Sathyanatha Stores Brahmavara

ಉಡುಪಿ ಜಿಲ್ಲಾ ಮಹಿಳಾಮೋರ್ಚಾ ವತಿಯಿಂದ “ಗೋವಿಗಾಗಿ ಮೇವು”ಅಭಿಯಾನ

ಭಾರತೀಯ ಜನತಾ ಪಾರ್ಟಿ ಉಡುಪಿಜಿಲ್ಲಾ ಮಹಿಳಾಮೋರ್ಚಾ ವತಿಯಿಂದ ಜಿಲ್ಲಾ ಅದ್ಯಕ್ಷರಾದ ವೀಣಾ ಎಸ್ ಶೆಟ್ಟಿಯವರ ನೇತೃತ್ವದಲ್ಲಿ ಇಂದು ಗೋವಿಗಾಗಿಮೇವು ಅಭಿಯಾನದಡಿ ಇಂದು ಅನಾಥ ಗೋವುಗಳ ಸಂರಕ್ಷಣೆ ಮಾಡುತ್ತಿರುವ ನೀಲಾವರ ಗೋಶಾಲೆಗೆ 2 ಲೋಡ್ ಹಸಿಹುಲ್ಲನ್ನು ಕಟಾವುಮಾಡಿ ಪೇಜಾವರ ವಿಶ್ವಪ್ರಸನ್ನ ಶ್ರೀಪಾದರಿಗೆ ಹಸ್ತಾಂತರಿ ಸಲಾಯಿತುಈ ಸಂದರ್ಭದಲ್ಲಿ ಕಾರ್ಯಕ್ರಮದ ಕುರಿತು ಮಾತನಾಡಿದ ಉಡುಪಿ ಜಿಲ್ಲಾ ಬಿಜೆಪಿ ಅದ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಪೇಜಾವರ ಶ್ರೀಪಾದರ ಆಶೀರ್ವಾದೊಂದಿಗೆ ಆರಂಭಗೊಂಡ ಗೋವಿಗಾಗಿ ಮೇವು ಅಭಿಯಾನ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದು ,ಮುಂದಿನ ದಿನ ಗಳಲ್ಲಿ ಬಿಜೆಪಿಯ ಎಲ್ಲಾ ಮೋರ್ಚಾ ಗಳಿಗೆ ಪ್ರತೀ ಮಹಾಶಕ್ತಿ ಕೇಂದ್ರದ ವ್ಯಾಪ್ತಿಯಲ್ಲಿ ವಾರಕ್ಕೊಮ್ಮೆ ಮೇವನ್ನು ನೀಡಲು ಸೂಚಿಸಲಾಗಿದೆ ಹಾಗೂ ರಾಜ್ಯ ಬಿಜೆಪಿ ಅದ್ಯಕ್ಷರ ಗಮನಕ್ಕೆ ಅಭಿಯಾನದ ಕುರಿತು ಗಮನ ತರಲಾಗಿದೆ ಎಂದರು ಕೆಲ ದಿನಗಳ ಹಿಂದೆ ಬಿಲ್ಲಾಡಿ ಪ್ರಥ್ವೀರಾಜ್ ಶೆಟ್ಟಿ ಹಾಗೂ ಕೆಲ ಯುವಕರಿಂದ ಆರಂಭಗೊಂಡ ಅಭಿಯಾನ ರಾಜ್ಯ ವ್ತಾಪಿ ಹರಡಲಿ ಎಂದರು ಮಹಿಳಾಮೋರ್ಚಾ ಜಿಲ್ಲಾ ಅದ್ಯಕ್ಷೆ ವೀಣಾ ಶೆಟ್ಟಿ ಮಾತನಾಡಿ ಉಡುಪಿ ಜಿಲ್ಲೆಯ 6 ಮಂಡಲದ ಮಹಿಳಾಮೋರ್ಚಾ ಗಳಿಗೆ ಅಭಿಯಾನದಲ್ಲಿ ಕೈಜೋಡಿಸಲು ಸೂಚಿ ಸಲಾಗಿದೆ ಹಾಗೂ ಜಿಲ್ಲೆಯ ಎಲ್ಲಾ ಸ್ತ್ರೀ ಶಕ್ತಿ,ಸ್ವಸಹಾಯ ಸಂಘಗಳು ಅಬಿಯಾನ ದಲ್ಲಿ ಪಾಲ್ಗೋಳ್ಳುವಂತೆ ವಿನಂತಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯೆ ನಳಿನಿ‌ಪ್ರದೀಪ್, ಉಡುಪಿ ಗ್ರಾಮಾಂತರ ಬಿಜೆಪಿ ಅದ್ಯಕ್ಷರಾದ ವೀಣಾ ನಾಯಕ್, ಮಹಿಳಾಮೋರ್ಚಾ ಪ್ರಧಾಕಾರ್ಯದರ್ಶಿ ರಶ್ಮಿತಾ B ಶೆಟ್ಟಿ, ಪ್ರಮೀಳಾ ಹರೀಶ್ ,ಉಪಾಧ್ಯಕ್ಷ ರಾದ ರಮಾಶೆಟ್ಟಿ, ಕಾರ್ಯದರ್ಶಿಗಳಾದ ವಿದ್ಯಾ ಪೈ,ಅಶ್ವಿನಿ,ನೀರಜಾ ಶೆಟ್ಟಿ, ಜುಬೇದಾ,ಸ್ನೇಹಾ ಅಲೆವೂರು, ನಗರಸಭಾ ಸದಸ್ಯರಾದ ರಜನಿ ಹೆಬ್ಬಾರ್, ಮಹಿಳಾ ಬಿಜೆಪಿ ಉಡುಪಿ ಗ್ರಾಮಂತರ ಅದ್ಯಕ್ಷೆ ವಸಂತಿ ಪೂಜಾರಿ, ಕಾರ್ಯದರ್ಶಿ ಶೋಭಾ,,ಸತೀಶ್ ಪೂಜಾರಿ ಉದ್ಯಾವರ, ನಿಶ್ಚಿತ್ ಶೆಟ್ಟಿ ಉಪಸ್ಥಿತರಿದ್ದರು

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!