ಗುರುವಿಲ್ಲದ ವಿದ್ಯೆ ಗುರಿಯಿಲ್ಲದ ಜೀವನ ವ್ಯರ್ಥ – ವಿದ್ವಾನ್ ಶ್ರೀ ಪ್ರಕಾಶ್ ಆಚಾರ್ ಸವಣೂರ

ಉಡುಪಿ : ಶ್ರೀ ಕೃಷ್ಣಮಧ್ವಾಸಂಸ್ಥಾನಮ್ ಉಡುಪಿ ಇದರ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಉಡುಪಿ ಉತ್ತರಾದಿ ಮಠದ ವ್ಯವಸ್ಥಾಪಕರೂ ಹಾಗೂ ಮಧ್ವ ಶಾಸ್ತ್ರದ ಶಿಕ್ಷಕರೂ ಆದ ಪ್ರಕಾಶ್ ಆಚಾರ್ಯರನ್ನು ಹಾಗೂ ಅವರ ಪತ್ನಿ ವಾರಿಣಿ ಪ್ರಕಾಶ ಆಚಾರ್ಯರರನ್ನು ಉಡುಪಿ ಉತ್ತರಾದಿ ಮಠದ ಶ್ರೀ ಜಯತೀರ್ಥ ಮೃತ್ತಿಕಾ ವೃಂದಾವನ ಸನ್ನಿಧಿಯಲ್ಲಿ ಅಭಿವಂದನಾ ಪತ್ರ ಸಮರ್ಪಿಸುವ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.

ಅಭಿನಂದನೆಯನ್ನು ಸ್ವೀಕರಿಸಿದ ಆಚಾರ್ಯರು ಶಿಕ್ಷಕರ ದಿನ ಒಂದೇ ದಿನಕ್ಕೆ ಸೀಮಿತವಾಗದೆ , ಮೂಲಗುರುಗಳಿಂದ,ಹಿಡಿದು ತಮಗೆ ವಿದ್ಯೆ ಕಲಿಸಿದ ಎಲ್ಲಾ ಗುರುವರೇಣ್ಯರನ್ನು ನಿತ್ಯವೂ ಸ್ಮರಿಸಿ ದಿಟ್ಟ ಗುರಿಯನಿಟ್ಟು ಜೀವನ ನಡೆಸಿ ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾಗಿ ಹಿರಿಯ ಗುರುಗಳ ಇಚ್ಛೆಯನ್ನು ಪೂರೈಸುವುದೇ ಗುರುವಂದನೆ ಎಂಬುದಾಗಿ ಗುರು ಸಂದೇಶ ನೀಡಿ ಹರಸಿದರು. ಆಚಾರ್ಯರ ಸಾಧನೆಗಳ ಪರಿಚಯವನ್ನು ವಿದ್ಯಾರ್ಥಿ ರಾಜೀವಲೋಚನ ಆಚಾರ್ಯ ತಿಳಿಸಿದರು. 

ಸಂಸ್ಥಾನದ ಗೌರವ ಸದಸ್ಯ ಗೋಪಾಲಕೃಷ್ಣ ಭಟ್, ಹಯವದನ ಭಟ್,ಪ್ರಸಾದ್ ಉಪಾಧ್ಯಾಯ,ರವೀಂದ್ರ ಆಚಾರ್ಯ, ಸುರೇಶ್ ಕಾರಂತ್, ಅನಂತಕೃಷ್ಣ ಭಾಗವತ್ ಉಪಸ್ಥಿತರಿದ್ದರು. ಸಂಸ್ಥಾನದ ಸಂಚಾಲಕ ರಮೇಶ್ ಭಟ್ ಕಡೆಕೊಪ್ಪಲ ಹಾಗೂ ಮಹಿತೋಷ್ ಆಚಾರ್ಯ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.

 
 
 
 
 
 
 
 
 

Leave a Reply