ಆಸ್ಕರ್ ವಿಜೇತ ಕಿರು ಸಾಕ್ಷ್ಯಚಿತ್ರ ‘ದಿ ಎಲಿಫೆಂಟ್ ವಿಸ್ಪರರ್ಸ್’ ಮಾಹೆಯ ಜಿಸಿಪಿಎಎಸ್ ನಲ್ಲಿ ಪ್ರದರ್ಶನ

ಪ್ರಪ್ರಥಮ ಆಸ್ಕರ್ ವಿಜೇತ ಭಾರತೀಯ ಕಿರು ಸಾಕ್ಷ್ಯಚಿತ್ರ ‘ದಿ ಎಲಿಫೆಂಟ್ ವಿಸ್ಪರರ್ಸ್’ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಶ್ರಯದಲ್ಲಿ ಮಾರ್ಚ್ 15, ಬುಧವಾರ ಸಂಜೆ 4 ಗಂಟೆಗೆ ಜಿಸಿಪಿಎಎಸ್ ನ ನೆಲಅಂತಸ್ತಿನ ಉಪನ್ಯಾಸ ಸಭಾಂಗಣ-2 ರಲ್ಲಿ ಪ್ರದರ್ಶನಗೊಳ್ಳಲಿದೆ. ಮಾನವ-ಪ್ರಕೃತಿ ಸಂಬಂಧವನ್ನು ವ್ಯಾಖ್ಯಾನಿಸುವ ಆನೆ ಮತ್ತು ಮಾನವರ  ಸಂಬಂಧವನ್ನು ಆಧರಿಸಿದ ‘ಎಲಿಫೆಂಟ್ ವಿಸ್ಪರರ್’ ಬಹಳಷ್ಟು ವಿಮರ್ಶಾತ್ಮಕ ಮೆಚ್ಚುಗೆಯನ್ನು ಮತ್ತು ಇತ್ತೀಚೆಗೆ ಘೋಷಿಸಲಾದ ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.

 
 
 
 
 
 
 
 
 
 
 

Leave a Reply