ಮಂಗಳೂರು ಸಿಸಿಬಿ ಪೊಲೀಸರಿಂದ ಅಂತರರಾಜ್ಯ ಗಾಂಜಾ ಸಾಗಾಟಗಾರರ ಬಂಧನ

ಮಂಗಳೂರು : ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಬೀದರ್ ಮತ್ತು ತೆಲಂಗಾಣದಿಂದ ಕಾರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಬಂದಿಸಿದ್ದಾರೆ.

ಬಂಧಿತರು ಉಳ್ಳಾಲ ಹಾಗೂ ಕೊಣಾಜೆ ಪೊಲೀಸರ ಠಾಣಾ ವ್ಯಾಪ್ತಿಯಲ್ಲಿ ಎರಡು ಕಾರು ಹಾಗೂ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಅಪಾರ ಪ್ರಮಾಣದ ಗಾಂಜಾ ಸಾಗಾಟ ಮಾಡುತ್ತಿದ್ದರು. ಈ ವೇಳೆ ಪೋಲಿಸರು ದಾಳಿ ನಡೆಸಿ ಒಂಬತ್ತು ಲಕ್ಷ ಎಪ್ಪತ್ತೈದು ಸಾವಿರ ಮೌಲ್ಯದ 44.630 ಕೆ.ಜಿ ಗಾಂಜಾ‌ ಹಾಗೂ ಎರಡು ಕಾರು ಹಾಗೂ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿರುತ್ತಾರೆ. ತೆಲಂಗಾಣ ರಾಜ್ಯದ ವಿಠಲ್ ಚವ್ಹಾಣ, ಬೀದರ್ ನ ಸಂಜುಕುಮಾರ್, ಕಲ್ಲಪ್ಪ, ಬಂಟ್ವಾಳದ ಅಜೀಜ್, ಮೊಯ್ದಿನ್ ಹಫೀಸ್,ಮೊಹಮ್ಮದ್ ಹಫೀಜ್, ಮಂಗಳೂರಿನ ಸಂದೀಪ್ ಎಂಬವರು ಬಂಧಿತರು, ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಕಮೀಷನರ್‌ ಎನ್‌ ಶಶಿಕುಮಾರ್‌,ಎರಡು ಪ್ರತ್ಯೇಕ ಪ್ರಕರಣದಲ್ಲಿ ಒಟ್ಟು 7ಜನ ಆರೋಪಿಗಳನ್ನು ಬಂಧಿಸಲಾಗಿದೆ.ಬಂದಿತ ಆರೋಪಿಗಳು ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕೇರಳದ ಕಾಸರಗೋಡು ಜಿಲ್ಲೆಯಲ್ಲೂ ತಮ್ಮ ನೆಟ್ವರ್ಕ್ ಹೊಂದಿದ್ದಾರೆ.ಅದಲ್ಲದೆ ಶಾಲಾ, ಕಾಲೇಜು ಗಳ ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದರು ಎನ್ನಲಾಗಿದೆ. ಬಂಧಿತರಿಂದ ಗಾಂಜಾ ಸಹಿತ ಕೃತ್ಯಕ್ಕೆ ಬಳಸಿದ ಎರಡು ಕಾರು, ದ್ವಿಚಕ್ರ ವಾಹನ ಸೇರಿದಂತೆ ಒಟ್ಟು 23 ಲಕ್ಷದ 25ಸಾವಿರ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

 
 
 
 
 
 
 
 
 
 
 

Leave a Reply