ಫ್ಲಾಟ್ ನ 5ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಗಂಭೀರ

ಪುತ್ತೂರು: ಮಹಡಿಯಿಂದ ಬಿದ್ದು ವಿದ್ಯಾರ್ಥಿ ಗಂಭೀರ ಗಾಯಗೊಂಡ ಘಟನೆ ಪುತ್ತೂರಿನ ಬೊಳುವಾರಿನಲ್ಲಿ ನಡೆದಿದೆ. ಇಲ್ಲಿನ ಮನೋಹರ್ ರೈ ಎಂಬವರ ಪುತ್ರ ಸುದಾನ ಶಾಲೆಯ 9 ನೇ ತರಗತಿಯ ಸುಹಾನ್ ಗಾಯಗೊಂಡ ವಿದ್ಯಾರ್ಥಿ.

ಸುಹಾನ್ ತಾನು ವಾಸವಿದ್ದ ವಸತಿ ಸಮುಚ್ಛಯದ 5ನೇ ಮಹಡಿಯಿಂದ ಬಿದ್ದಿದ್ದಾನೆ. ಗಂಭೀರ ಗಾಯಗೊಂಡ ಆತನನ್ನು ಪುತ್ತೂರಿನ ಆಸ್ಪತ್ರೆಗೆ ಕರೆದುಕೊಂಡ ಹೋಗಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗಲಾಗಿದೆ.

Leave a Reply