ಜಿಲ್ಲಾ ನ್ಯಾಯಾಧೀಶರಿಂದ ಎಂಡೋಸಲ್ಫಾನ್ ಸಂತ್ರಸ್ಥರ ಭೇಟಿ

ಉಡುಪಿ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರು ಹಾಗೂ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅರವಿಂದ ಕುಮಾರ್ ನಿರ್ದೇಶನದ ಮೇರೆಗೆ ಎಂಡೋಸಲ್ಫಾನ್ ಕೀಟನಾಶಕದ ದುಷ್ಪರಿಣಾಮಕ್ಕೆ ತುತ್ತಾಗಿ ದೈಹಿಕ ಹಾಗೂ ಮಾನಸಿಕ ನ್ಯೂನತೆಯಿಂದ ನರಳುತ್ತಿರುವ ಸಂತ್ರಸ್ಥರ ಪ್ರಸ್ತುತ ಪರಿಸ್ಥಿತಿಯನ್ನು ಪರಿಶೀಲಿಸಿ ವರದಿ ಕಳುಹಿಸಲು ಇಂದು ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದಲ್ಲಿ ಅವರನ್ನು ಭೇಟಿ ಮಾಡಲಾಯಿತು.

ಎಂಡೋಸಲ್ಫಾನ್ ಸಂತ್ರಸ್ಥರಾದ ಮಣಿಕಂಠ ಹೆರಿಂಜಾಲು, ರೋಶನಿ, ನಾಗಮ್ಮ ಮತ್ತು ಮಹಮ್ಮದ್ ಐಯಾನ್ (8 ವರ್ಷ) ಕಂಬದಕೋಣೆ, ರಂಜಿತ, ತರಣ್ ಮತ್ತು ತನ್ಮಯಿ ಹೆರೂರು ಇವರನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಭೇಟಿ ಮಾಡಿದರು.

ಬೈಂದೂರು ತಹಸೀಲ್ದಾರ್ ಶೋಭಾ ಲಕ್ಷ್ಮಿ,ಸಂಗೀತ,ಖಂಬದಕೋಣೆ ಪಂಚಾಯತ್ ಅಧ್ಯಕ್ಷ ಸುಕೇಶ್ ಶೆಟ್ಟಿ, ಪಿಡಿಒ ಪೂರ್ಣಿಮಾ ಶೇಟ್, ಡಾ. ನಿಶಾ ರೆಬೆಲ್ಲೊ ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply