ಈದ್ ಸಂದೇಶ – ಕೋಟ ಇಬ್ರಾಹಿಂ ಸಾಹೇಬ್

ಕೊರೋನಾ ಎಂಬ ಮಹಾಮಾರಿಯು ಈ ಜಗತ್ತನ್ನು ಕಳೆದ ಒಂದೂವರೆ ವರ್ಷಗಳಿಂದ ಪೀಡಿಸಿತು. ನಮ್ಮ ಭಾರತ ದೇಶವು ಅದರ ಹೊರತಾಗಿಲ್ಲ. ಆಡಳಿತದ ಪ್ರಯತ್ನ, ಆರೋಗ್ಯ ಸೇನಾನಿಗಳ ಪರಿಶ್ರಮ ಮತ್ತು ಬಲಿದಾನ ಹಾಗೂ ಪ್ರಜೆಗಳ ದಿಟ್ಟತನಗಳಿಂದಾಗಿ ನಾವೆಲ್ಲರೂ ಅಲ್ಲಾಹನ ದಯೆ ಯಿಂದ ಬದುಕುಳಿದಿರುವುದಕ್ಕಾಗಿ ಕೃತಾರ್ಥರಾಗೋಣ. ಈ ಅವಧಿಯಲ್ಲಿ ನಮ್ಮನ್ನಗಲಿದ ಅದೇಷ್ಟೋ ದೇಶ ಬಾಂಧವರು ಆರೋಗ್ಯ ವಾರಿಯರ್ಸ್ ಮತ್ತು ನಮ್ಮವರನ್ನು ಸ್ಮರಿಸುತ್ತ ಅವರ ಸದ್ಗತಿಗಾಗಿ ಪ್ರಾರ್ಥಿಸೋಣ.

ಅಲ್ಲಾಹನ ಸಂಪ್ರೀತಿಗಾಗಿ ಪ್ರವಾದಿ ಇಬ್ರಾಹಿಂ(ಅ.ಸ) ಹಾಗೂ ಇಸ್ಮಾಯಿಲ್ (ಅ.ಸ.)ರವರ ತ್ಯಾಗ ಹಾಗೂ ಬಲಿದಾನಗಳ ಪ್ರತೀಕವಾಗಿ ಆಚರಿಸುವ ಈದ್ ಉಲ್ ಅಝಾ(ಬಕ್ರೀದ್) ಬಂದಿದೆ. ಕಳೆದ ವರ್ಷವೂ ಕೂಡ ಈ ಹಬ್ಬವನ್ನು ಬಹಳ ಸರಳವಾಗಿ ಆಚರಿಸಿದ್ದೇವು. ಇಂದು ಕೂಡ ನಾವೆಲ್ಲ ಕೃತಜ್ಞತಾ ಭಾವದೊಂದಿಗೆ ಹಬ್ಬವನ್ನು ಸರಳವಾಗಿ ಆಚರಿಸಬೇಕು.

 ಯಾವುದೇ ಗೌಜು ಗದ್ದಲಗಳಿಲ್ಲದೆ ಬಲಿದಾನವನ್ನು ನಿರ್ವಹಿಸಬೇಕು. ಕೋವಿಡ್ -19 ನಿಯಂತ್ರಣಕ್ಕಾಗಿ ಜಿಲ್ಲಾಡಳಿತದ ಮಾರ್ಗಸೂಚಿಗಳನ್ನು ಪಾಲಿಸ ಬೇಕು. ಒಬ್ಬರಿಂದೊಬ್ಬರ, ತನ್ಮೂಲಕ ಸಮುದಾಯದ, ಸಮಾಜದ ಹಾಗೂ ಅಂತಿಮವಾಗಿ ದೇಶದ ಪ್ರಗತಿಗಾಗಿ ಹಾಗೂ ಉನ್ನತಿಗಾಗಿ ಪ್ರಾರ್ಥಿಸೋಣ ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಕೋಟ ಇಬ್ರಾಹಿಂ ಸಾಹೇಬ್ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply